Connect with us

Latest

ಜನವರಿಯಲ್ಲಿ ರಜನಿಕಾಂತ್ ಪಕ್ಷ ಲಾಂಚ್- ಡಿ.31ರಂದು ಘೋಷಣೆ

Published

on

ಚೆನ್ನೈ: ನಟ ರಜನಿಕಾಂತ್ ತಮ್ಮ ರಾಜಕೀಯ ಪಕ್ಷವನ್ನು ಜನವರಿಯಲ್ಲಿ ಲಾಂಚ್ ಮಾಡಲಿದ್ದೇನೆ. ಈ ಕುರಿತು ಡಿಸೆಂಬರ್ 31ರಂದು ಪ್ರಮುಖ ಘೋಷಣೆ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಜನವರಿಯಲ್ಲಿ ರಾಜಕೀಯ ಪಕ್ಷವನ್ನು ಲಾಂಚ್ ಮಾಡಲಿದ್ದೇನೆ. ಈ ಕುರಿತು ಜನವರಿ 31ರಂದು ಪ್ರಮುಖ ಘೋಷಣೆ ಮಾಡಲಿದ್ದೇನೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಡಿ.31ರಂದು ಮಾಡಲಿರುವ ಅನೌನ್ಸ್ ಮೆಂಟ್ ಏನು ಎಂಬುದು ಇದೀಗ ಕುತೂಹಲವಾಗಿದೆ.

ಸೋಮವಾರವಷ್ಟೇ ರಜನಿಕಾಂತ್ ಅವರು ಆರ್‍ಎಂಎಂ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಭೆ ಕರೆದಿದ್ದರು. ಜನರೊಂದಿಗೆ ಮಾತನಾಡಿ ಹೆಚ್ಚಿನ ಮಾಹಿತಿ ತಿಳಿಸಲಿದ್ದೇನೆ ಎಂದು ಈ ಹಿಂದೆ ಹೇಳಿದ್ದರು. ರಾಜಕೀಯ ಪ್ರವೇಶಿಸುವ ಕುರಿತು ರಜನಿಕಾಂತ್ ಡಿಸೆಂಬರ್ 31, 2017ರಲ್ಲೇ ಘೋಷಣೆ ಮಾಡಿದ್ದರು.

ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯದಲ್ಲಿ ಬದಲಾವಣೆ ತರುವುದಾಗಿ ಸಹ ತಿಳಿಸಿದ್ದರು. ಆದರೆ ನಂತರ ಈ ಬಗ್ಗೆ ಹೆಚ್ಚು ಅಪ್‍ಡೇಟ್ ಸಿಕ್ಕಿರಲಿಲ್ಲ. ಲೋಕಸಭಾ ಚುನಾವಣೆ ವೇಳೆ ಸಹ ರಾಜಕೀಯದ ಕುರಿತು ತಮ್ಮ ನಿರ್ಧಾರ ಘೋಷಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ರಜನಿಕಾಂತ್ ಇನ್ನೂ ಸಮಯ ಬೇಕು ಎಂದಿದ್ದರು. ಇದೆಲ್ಲದರ ಮಧ್ಯೆ ಬಿಜೆಪಿ ಸೇರಲಿದ್ದಾರೆ ಎಂಬ ಅಂಶ ಸಹ ಚರ್ಚೆಗೆ ಬಂದಿತ್ತು. ಆದರೆ ರಾಜಕೀಯಕ್ಕೆ ಆಗಮಿಸುವ ಕುರಿತು ಘೋಷಣೆ ಮಾಡಿ ಮೂರು ವರ್ಷದ ಕಳೆದರೂ ಯಾವುದೇ ಬೆಳವಣಿಗೆ ಕಂಡುಬಂದಿರಲಿಲ್ಲ. ಹೀಗಾಗಿ ರಜನಿ ರಾಜಕೀಯದಿಂದ ಹಿಂದೆ ಸರಿಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಿತ್ತು.

ಇದೀಗ ತಮ್ಮ ರಾಜಕೀಯ ಪಕ್ಷದ ಕುರಿತು ರಜನಿಕಾಂತ್ ಅಪ್‍ಡೇಟ್ ನೀಡಿದ್ದಾರೆ. ಅಲ್ಲದೆ ಮುಂಬರುವ ತಮಿಳುನಾಡು ವಿಧಾನ ಸಭಾ ಚುನಾವಣೆಗೆ ಈ ಮೂಲಕ ತಯಾರಿಯನ್ನು ಸಹ ಮಾಡಿಕೊಳ್ಳುತ್ತಿದ್ದಾರೆ. ಡಿ.31ರ ತಲೈವಾ ಅನೌನ್ಸ್ ಮೆಂಟ್ ಕುತೂಹಲ ಹುಟ್ಟಿಸಿದೆ.

Click to comment

Leave a Reply

Your email address will not be published. Required fields are marked *

www.publictv.in