LatestMain PostNational

ಮೋದಿ ಸರ್ಕಾರದಲ್ಲಿ ದುರಾಡಳಿತ: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ದುರಾಡಳಿತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೇಗೆ ಹಾಳು ಮಾಡುತ್ತದೆ ಎಂಬುದಕ್ಕೆ ಮೋದಿ ಸರ್ಕಾರ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.

ಬೇಸಿಗೆಯ ತಾಪಮಾನ ಅಧಿಕವಾಗುತ್ತಿರುವುದರ ನಡುವೆ ವಿದ್ಯುತ್ ಹಾಗೂ ಕಲ್ಲಿದ್ದಲು ಕೊರತೆಯು ಅಧಿಕವಾಗುತ್ತಿದೆ. ಈ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದರು.

NARENDRA MODI

ಟ್ವೀಟ್‍ನಲ್ಲಿ ಏನಿದೆ?: ವಿದ್ಯುತ್ ಬಿಕ್ಕಟ್ಟು, ನಿರುದ್ಯೋಗ, ರೈತರ ಸಮಸ್ಯೆ, ಹಣದುಬ್ಬರ ಇವೆಲ್ಲವೂ ಪ್ರಧಾನಿ ಮೋದಿ ಅವರ 8 ವರ್ಷಗಳ ದುರಾಡಳಿತಾಗಿದೆ. ಈ ದುರಾಡಳಿತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳನ್ನು ಹೇಗೆ ಹಾಳು ಮಾಡುತ್ತದೆ ಎಂಬುದರ ಕುರಿತು ಅಧ್ಯಯನವಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಕಾರಿನಲ್ಲಿದ್ದ ಮೊಬೈಲ್ ಕದ್ದ – ಕರೆ ಮಾಡಿದ್ರೆ ಹಣಕ್ಕಾಗಿ ಬ್ಲಾಕ್‌ಮೇಲ್

ರಾಹುಲ್ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷವು ಏರುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದ ಬಗ್ಗೆ ನಿರಂತರವಾಗಿ ಬಿಜೆಪಿ ಸರ್ಕಾರದ ಮೇಲೆ ದಾಳಿ ಮಾಡುತ್ತಿದೆ. ಇದನ್ನೂ ಓದಿ: ಬಾಬರಿ ಧ್ವಂಸ ವೇಳೆ ಶಿವಸೇನೆ ಎಲ್ಲಿತ್ತು ಎಂದು ನಿಮ್ಮ ನಾಯಕರನ್ನು ಕೇಳಿ: ಬಿಜೆಪಿಗೆ ರಾವತ್ ತಿರುಗೇಟು

Leave a Reply

Your email address will not be published.

Back to top button