ದಿಸ್ಪುರ: ಅಸ್ಸಾಂನ (Assam) ಜೋರ್ಹತ್‌ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಶನಿವಾರ ಭಾರತೀಯ ವಾಯುಪಡೆಯ (IAF) ಎಎನ್ -32 ಸಾರಿಗೆ ವಿಮಾನ (AN-32 Transport Aircraft) ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಗಿದೆ.
ಎಎನ್ -32 ವಿಮಾನವು ವಾಯುಪಡೆ ನಿಲ್ದಾಣದ ಆವರಣದಲ್ಲಿ ಪತನಗೊಂಡಿತು. ಅಪಘಾತದ ನಂತರ ಬೆಂಕಿ ಹೊತ್ತಿಕೊಂಡಿತು. ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ.
ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸಾವುನೋವುಗಳು ಅಥವಾ ಗಾಯಾಳುಗಳ ಯಾವುದೇ ವರದಿಯಾಗಿಲ್ಲ. ಭಾರತೀಯ ವಾಯುಪಡೆಯು ಘಟನೆ ಬಗ್ಗೆ ದೃಢಪಡಿಸಿದ್ದು, ಪರಿಸ್ಥಿತಿಯ ಮೌಲ್ಯಮಾಪನದ ನಂತರ ಹೆಚ್ಚಿನ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದೆ.
