ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಚುನಾವಣೆಗೆ (Legislative Council Elections) ದಿನಾಂಕ ಸಮೀಪಿಸುತ್ತಿದೆ. ಈ ಹಿನ್ನೆಲೆ ಕುದುರೆ ವ್ಯಾಪಾರದ ಭೀತಿ ಹೆಚ್ಚಾಗಿದ್ದು, ವಿಪಕ್ಷಗಳು ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ರೆಸಾರ್ಟ್ ರಾಜಕಾರಣಕ್ಕೆ ಮುಂದಾಗುತ್ತಿವೆ.
ಹೌದು. ಜೂನ್ 18 ರಂದು ಪರಿಷತ್ ಚುನಾವಣೆ ಇರುವ ಕಾರಣ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಜೆಡಿಎಸ್ (JDS) ಪ್ಲ್ಯಾನ್ ಮಾಡಿದೆ. ಜೂನ್ 16 ರಂದೇ ಶಾಸಕರನ್ನ ರೆಸಾರ್ಟ್ ಅಥವಾ ಹೋಟೆಲ್‌ಗಳಿಗೆ ಶಿಫ್ಟ್ ಮಾಡಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿ ಖಾತೆ ವಹಿಸಿಕೊಳ್ಳದ ಕೃಷ್ಣ ಬೈರೇಗೌಡ

ಸದ್ಯ ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲುವಿಗೆ 2 ಮತಗಳ ಕೊರತೆಯಿದೆ. ಆದ್ದರಿಂದ ಆಪರೇಷನ್ ಹಸ್ತ ನಡೆಸುವ ಸಾಧ್ಯತೆಯಿದೆ ಅನ್ನೋದು ಜೆಡಿಎಸ್‌ನ ಆರೋಪ. ಆದ್ದರಿಂದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ನೇತತ್ವದಲ್ಲಿ ದಳದ ಶಾಸಕರನ್ನ ರೆಸಾರ್ಟ್‌ಗಳಿಗೆ ಶಿಫ್ಟ್ ಮಾಡೋದಕ್ಕೆ ನಿರ್ಧರಿಸಲಾಗಿದೆ.
ಕೋಲಾರ ಅಥವಾ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ವಾಸ್ತವ್ಯಕ್ಕೆ ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಇದನ್ನೂ ಓದಿ: ಮಗನ ನೆನೆದು ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಜಿಟಿ ದೇವೇಗೌಡ
2024 ರಲ್ಲಿ ನಡೆದ ರಾಜ್ಯಸಭಾ ಚುನಾವಣೆ ವೇಳೆ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರು. ಈ ಬಾರಿ ಅಡ್ಡ ಮತದಾನ,ಆಪರೇಷನ್ ಹಸ್ತ ತಡೆಯೋದಕ್ಕೆ ಮುಂದಾಗಿರುವ ಜೆಡಿಎಸ್ ರೆಸಾರ್ಟ್‌ಗೆ ಶಿಫ್ಟ್ ಮಾಡಲು ನಿರ್ಧರಿಸಿದೆ.
