ಲಕ್ನೋ: ಉತ್ತರ ಪ್ರದೇಶದ (Uttar Pradesh) ಸಂಭಾಲ್‌ನಲ್ಲಿರುವ (Sambhal) ಅಲ್-ಹಸ್ನೈನ್ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ (80th Independence Day) ಸಂದರ್ಭದಲ್ಲಿ ಕಾಂಕ್ರೀಟ್ ಛಾವಣಿ ಕುಸಿದು ಒಂದು ಮಗು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಧ್ವಜಾರೋಹಣ ಸಮಾರಂಭದ ನಂತರ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆಲವು ಮಕ್ಕಳು ಶಾಲೆಯ ಮುಖ್ಯ ದ್ವಾರದ ಮೇಲಿದ್ದ ಛಾವಣಿ ಹತ್ತಿದಾಗ, ತೂಕ ಹೆಚ್ಚಾಗಿ ರಚನೆ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಇದನ್ನೂ ಓದಿ: ಝೆನ್-ಜಿ, ಆಲ್ಫಾ ಅಂತ ಕರೆಯಬೇಡಿ.. ‘ಮಗ-ಮಗಳು’ ಎಂದು ಕರೆಯಿರಿ: ಅಸ್ಸಾಂ ಸಿಎಂ
उत्तर प्रदेश के संभल में स्वतंत्रता दिवस समारोह के दौरान अल हसनैन पब्लिक स्कूल के मुख्य गेट का छज्जा अचानक भरभराकर नीचे गिर गया. हादसे में छज्जे के नीचे दबकर एक छह वर्षीय बच्चे की मौत हो गई@Uppolice#UttarPradesh #Sambhal pic.twitter.com/JSDXToTtNX
— Amit Singh 🇮🇳❣️ (@KR_AMIT007) August 15, 2026
ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಎಸ್‌ಡಿಎಂ, ವೃತ್ತ ಅಧಿಕಾರಿ (ಸಿಒ) ಮತ್ತು ಸ್ಟೇಷನ್ ಹೌಸ್ ಅಧಿಕಾರಿ (ಎಸ್‌ಎಚ್‌ಒ) ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅಂಕಿತ್ ಖಂಡೇಲ್ವಾಲ್, ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೃಷ್ಣ ಕುಮಾರ್ ಬಿಷ್ಣೋಯ್ ಮತ್ತು ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಅಲ್ಕಾ ಶರ್ಮಾ ಕೂಡ ಸ್ಥಳದಲ್ಲಿದ್ದರು.
ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಂಭಾಲ್ ತಹಸಿಲ್‌ನ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮದಲಾ ಫತೇಪುರ್ ಗ್ರಾಮದಲ್ಲಿರುವ ಅಲ್-ಹಸ್ನೈನ್ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ನಯೀಮ್ ಎಂಬವರ ಪುತ್ರ ಆರು ವರ್ಷದ ನಿಜಾಮ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. 11 ವರ್ಷದ ಸೈಫ್ ಅಲಿ (7ನೇ ತರಗತಿ) ಮತ್ತು 10 ವರ್ಷದ ಶೈದಾನ (5 ನೇ ತರಗತಿ) ಗಾಯಗೊಂಡಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯನ್ನೇ ಮರೆತ ಅಧಿಕಾರಿಗಳು – ಕೊಡಗು ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ಲಕ್ಷ್ಯ!
ಸ್ಥಳದಲ್ಲಿದ್ದವರು ಅವಶೇಷಗಳನ್ನು ತೆಗೆದು ಮಕ್ಕಳನ್ನು ರಕ್ಷಿಸಿದ್ದಾರೆ. ಗಾಯಗೊಂಡ ಮಕ್ಕಳನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ನಿಜಾಮ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಘಟನೆಯ ನಂತರ ನಿಜಾಮ್ ಅವರ ಕುಟುಂಬ ತೀವ್ರ ಆಘಾತದಲ್ಲಿದೆ. ಗಾಯಗೊಂಡ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

