ತುಮಕೂರು: ಆಷಾಢಕ್ಕೆ ತವರು ಮನೆಗೆ ಹೋದ ಪತ್ನಿ (Wife) ವಾಪಸ್ ಬರದೇ ಇದ್ದಿದ್ದಕ್ಕೆ ಮನನೊಂದು ಪತಿ ನೇಣಿಗೆ ಶರಣಾದ ಘಟನೆ ಕುಣಿಗಲ್ (Kunigal) ಪಟ್ಟಣದ ಮಹಾವೀರ ನಗರದಲ್ಲಿ ನಡೆದಿದೆ.

ಅವಿನಾಶ್ (28) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ 6 ತಿಂಗಳ ಹಿಂದಷ್ಟೇ ಹಾಸನದ ಅರಸೀಕೆರೆ ಮೂಲದ ಯುವತಿಯನ್ನು ಅವಿನಾಶ್ ಪ್ರೀತಿಸಿ ಮದುವೆಯಾಗಿದ್ದ. ಆಷಾಢಕ್ಕೆ ಪತ್ನಿ ತವರಿಗೆ ತೆರಳಿದ್ದಳು. ಕರೆ ಮಾಡಿ ಬರುವಂತೆ ಅವಿನಾಶ್ ತಿಳಿಸಿದ್ದ. ಆದರೆ ನಾನು ಬರಲ್ಲ ಎಂದು ಪತ್ನಿ ಹೇಳಿದ್ದಳು. ಇದನ್ನೂ ಓದಿ: ಉಡುಪಿ | ಡೇವಿಡ್ ಡಿಸೋಜಾ ಹತ್ಯೆ ಕೇಸ್; ಮತ್ತಿಬ್ಬರು ಪ್ರಮುಖ ಆರೋಪಿಗಳ ಬಂಧನ
ಇದೇ ವಿಚಾರಕ್ಕೆ ಅವಿನಾಶ್ ಮನನೊಂದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಇದನ್ನೂ ಓದಿ: ಭಾರತ, ಪಾಕ್ ಸೇನೆ ಮೇಲೆ ದಾಳಿಗೆ ಅಸಾಫುಲ್ ಪ್ಲ್ಯಾನ್ – ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
