ನವದೆಹಲಿ: ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಹುಡುಗನನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‍ಎ) ಅಪಹರಿಸಿದ ಘಟನೆಯ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?: ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಇದಕ್ಕೂ ಮೊದಲೇ ಭಾರತದ ಹುಡುಗನನ್ನು ಚೀನಾ ಅಪಹರಿಸಿದೆ. ನಾವು ಮಿರಾಮ್ ಟ್ಯಾರೋನ್ ಅವರ ಕುಟುಂಬದೊಂದಿಗೆ ನಿಲ್ಲುತ್ತೇವೆ ಹಾಗೂ ಅವರ ಭರವಸೆಯನ್ನು ಹುಸಿಗೊಳಿಸುವುದಿಲ್ಲ. ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು.
Advertisement
गणतंत्र दिवस से कुछ दिन पहले भारत के एक भाग्य विधाता का चीन ने अपहरण किया है- हम मीराम तारौन के परिवार के साथ हैं और उम्मीद नहीं छोड़ेंगे, हार नहीं मानेंगे।
PM की बुज़दिल चुप्पी ही उनका बयान है- उन्हें फ़र्क़ नहीं पड़ता!
— Rahul Gandhi (@RahulGandhi) January 20, 2022
Advertisement
ಪ್ರಧಾನಿ ಮೋದಿಯವರ ಮೌನವೇ ಅವರ ಹೇಳಿಕೆಯಾಗಿದೆ. ಇದಕ್ಕೆಲ್ಲಾ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಘಟನೆಯೇನು?: ಅರುಣಾಚಲ ಪ್ರದೇಶದಲ್ಲಿ ತ್ಸಾಂಗ್ಪೋ ನದಿಯು ಭಾರತವನ್ನು ಪ್ರವೇಶಿಸುವ ಸಮೀಪದಲ್ಲಿ ಜೀಡೋ ಗ್ರಾಮದ ಮಿರಾಮ್ ಟ್ಯಾರೋನ್ (17) ಹಾಗೂ ಆತನ ಸ್ನೇಹಿತ ಜಾನಿ ಯಾಯಿಂಗ್ ಬೇಟೆಗಾಗಿ ತೆರಳಿದ್ದರು. ಅಲ್ಲಿ ಮಿರಾಮ್ ಅವರನ್ನು ಪಿಎಲ್‍ಎ ಅಧಿಕಾರಿಗಳನ್ನು ಅಪಹರಿಸಿದ್ದರು. ಅವನ ಜೊತೆಯಿದ್ದ ಸ್ನೇಹಿತ ಜಾನಿ ಯಾಯಿಂಗ್ ಪಿಎಲ್‍ಎ ಅಧಿಕಾರಿಗಳಿಂದ ತಪ್ಪಿಸಿಕೊಂಡು ಬಂದಿದ್ದಾನೆ. ನಂತರ ವಿರಾಮನ್ ಟ್ಯೂರೋನ್‍ನ ಅಪಹರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಓದಿ: ಲಡಾಖ್‌ನಲ್ಲಿ ಚೀನಾದಿಂದ ಪ್ಯಾಂಗ್ಯಾಂಗ್ ಸೇತುವೆ ನಿರ್ಮಾಣ – ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
1/2
Chinese #PLA has abducted Sh Miram Taron, 17 years of Zido vill. yesterday 18th Jan 2022 from inside Indian territory, Lungta Jor area (China built 3-4 kms road inside India in 2018) under Siyungla area (Bishing village) of Upper Siang dist, Arunachal Pradesh. pic.twitter.com/ecKzGfgjB7
— Tapir Gao (@TapirGao) January 19, 2022
ಘಟನೆ ಕುರಿತು ನಿನ್ನೆ ರಾಜ್ಯ ಸಂಸದ ತಪಿರ್ ಗಾವೊ ಟ್ವೀಟ್ ಮಾಡಿ, ಭಾರತ ಸರ್ಕಾರದ ಎಲ್ಲಾ ಏಜೆನ್ಸಿಗಳು ಮಿರಾಮ್ ಟ್ಯಾರೋನ್‍ನನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ವಹಿಸುವಂತೆ ಮನವಿ ಮಾಡಿದ್ದರು. ತ್ಸಾಂಗ್ಪೋ ನದಿಯನ್ನು ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ಮತ್ತು ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂದು ಕರೆಯುತ್ತಾರೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಚನ್ನಿ ಅಪ್ರಾಮಾಣಿಕ ವ್ಯಕ್ತಿ: ಅರವಿಂದ್ ಕೇಜ್ರಿವಾಲ್