ನವದೆಹಲಿ: ಹಿಂದೂ ಧರ್ಮ, ಹಿಂದುತ್ವ ಎರಡು ಬೇರೆ ಬೇರೆ ವಿಷಯಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾಂಗ್ರೆಸ್ ಪಕ್ಷದ ಡಿಜಿಟಲ್ ಅಭಿಯಾನವಾದ ಜನ್ ಜಾಗರಣ ಅಭಿಯಾನದ (digital campaign Jan Jagran Abhiyan) ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವೇನು? ಅವು ಒಂದೇ ಆಗಿರಬಹುದೇ? ಒಂದೇ ಆಗಿದ್ದರೆ, ಏಕೆ ಒಂದೇ ಹೆಸರಿಲ್ಲ? ವಿಭಿನ್ನ ವಿಷಯಗಳಾಗಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚೀನಾ ಕುರಿತು ಸರ್ಕಾರ ಯಾವುದೇ ಕಾರ್ಯತಂತ್ರ ಹೊಂದಿಲ್ಲ: ರಾಹುಲ್ ಗಾಂಧಿ
Advertisement
What is the difference between Hinduism & Hindutva, can they be the same thing? If they’re the same thing, why don’t they have the same name? They’re obviously different things. Is Hinduism about beating a Sikh or a Muslim? Hindutva of course is: Congress leader Rahul Gandhi pic.twitter.com/Hv1GrbM4Lm
— ANI (@ANI) November 12, 2021
Advertisement
ಕಾಂಗ್ರೆಸ್ ಪಕ್ಷದ ಸಿದ್ಧಾಂತ ಜೀವಂತವಾಗಿದೆ ಮತ್ತು ರೋಮಾಂಚಕವಾಗಿದೆ. ಆದರೆ ಅದನ್ನು ಮರೆ ಮಾಡಲಾಗಿದೆ. ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ( RSS) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) (Bharatiya Janata Party) ದ್ವೇಷದ ಸಿದ್ಧಾಂತವು ನಮಗೆ ಇಷ್ಟವಾಗಲಿ ಅಥವಾ ಇಲ್ಲದಿರಲಿ. ಕಾಂಗ್ರೆಸ್ ಪಕ್ಷದ ಪ್ರೀತಿ, ವಾತ್ಸಲ್ಯ ಮತ್ತು ರಾಷ್ಟ್ರೀಯತೆಯ ಸಿದ್ಧಾಂತವನ್ನು ನಾವು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ
Advertisement
Advertisement
ಕಾಂಗ್ರೆಸ್ ಪಕ್ಷವು ಜನರಲ್ಲಿ ಸಿದ್ಧಾಂತವನ್ನು ಆಕ್ರಮಣಕಾರಿಯಾಗಿ ಪ್ರಚಾರ ಮಾಡದ ಕಾರಣ ಪಕ್ಷದ ಸಿದ್ಧಾಂತವು ಮಬ್ಬಾಗಿದೆ ಎಂದು ವಿವರಿಸಿದರು. ಕೇಂದ್ರದ ಬಡವರ ವಿರೋಧಿ ನೀತಿಗಳನ್ನು ಎತ್ತಿ ಹಿಡಿಯಲು, ಈ ಬಗ್ಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷವು ನವೆಂಬರ್ 14ರಿಂದ ನವೆಂಬರ್ 29ರ ನಡುವೆ ಜನ ಜಾಗರಣ ಅಭಿಯಾನ ಎಂಬ ಹೆಸರಿನಲ್ಲಿ ರಾಷ್ಟ್ರವ್ಯಾಪಿ ಜನಜಾಗೃತಿ ಕಾರ್ಯಕ್ರಮವನ್ನು ನಡೆಸಲಿದೆ. ಇದನ್ನೂ ಓದಿ: ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?