-ಮನೆಗೆ ಬಂದು ತನಿಖೆ ನಡೆಸಿ ಹೋದ್ರು
ಹುಬ್ಬಳ್ಳಿ/ಧಾರವಾಡ: ದೊಡ್ಡವರಾದ ಮೇಲೆ ಮೀಸೆ ದಾಡಿ ಬರಲೇಬೇಕು. ನಾವು ಸೆಲೆಬ್ರಿಟಿ ಆಗಿ ಸಂಪಾದನೆ ಮಾಡಿದ ನಂತರ ಐಟಿ ಇವೆಲ್ಲ ಬರಲೇಬೇಕು. ನ್ಯಾಯ, ಕಾನೂನುಗಳಿಗೆ ಮೇಲಾದವರು ಯಾರೂ ಇಲ್ಲ. ಮನೆಗೆ ಬಂದ ಅಧಿಕಾರಿಗಳು ದಾಖಲಾತಿಯ ಪರಿಶೀಲನೆ ನಡೆಸಿದರು. ಮುಂದೆ ಏನು ಮಾಡಬೇಕು ಎಂಬುದನ್ನು ನಾವು ತೀರ್ಮಾನಿಸುತ್ತೇವೆ ಎಂದು ನಟ ರಾಘವೇಂದ್ರ ರಾಜ್‍ಕುಮಾರ್ ಹೇಳಿದರು.
ನಟ ಸಾರ್ವಭೌಮ ಧ್ವನಿ ಸುರಳಿ ಬಿಡುಗಡೆಗಾಗಿ ಹುಬ್ಬಳ್ಳಿಗೆ ಬಂದಿದ್ದಕ್ಕೆ ಖುಷಿಯಿದೆ. ಅಪ್ಪಾಜಿ ಸಿದ್ದರೂಢ ಮಠದಲ್ಲಿದ್ದಾಗ ಮದ್ರಾಸ್ ನಿಂದ ಸಿನಿಮಾಗೆ ಆಫರ್ ಬಂದಿತ್ತು. ಇಲ್ಲಿ ಬಂದಾಗ ಅಪ್ಪಾಜಿ ನಮಗೆ ಜ್ಞಾಪಕ ಆಗುತ್ತಾರೆ ಎಂದು ರಾಘವೇಂದ್ರ ರಾಜ್‍ಕುಮಾರ್ ತಂದೆಯನ್ನು ನೆನಪು ಮಾಡಿಕೊಂಡರು.
Advertisement
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಮಾಡುವುದಕ್ಕೆ ಇಲ್ಲಿ ಬಂದಿದ್ದೇವೆ. ನಾವು ನಮ್ಮ ಕೆಲಸವನ್ನು ಮಾಡಿದ್ದು, ಜನರ ಆಶೀರ್ವಾದ ಬೇಕು. ಹುಬ್ಬಳ್ಳಿಯಲ್ಲಿ ಸಿನಿಮಾ ಕಾರ್ಯಕ್ರಮ ಮಾಡಬೇಕೆಂಬ ಆಸೆ ಇತ್ತು. ಹಾಗಾಗಿ ನಟಸಾರ್ವಭೌಮ ಚಿತ್ರದ ಹಾಡುಗಳನ್ನು ಇಲ್ಲಿಯೇ ರಿಲೀಸ್ ಮಾಡ್ತಿದ್ದೇವೆ ಅಂತಾ ತಿಳಿಸಿದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv