Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹುಟ್ಟೂರಿನ ಮಣ್ಣಲ್ಲಿ ಧ್ರುವನಾರಾಯಣ್ ಲೀನ – ರಾಜಕೀಯದ ಅಜಾತಶತ್ರು ಇನ್ನು ನೆನಪು ಮಾತ್ರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chamarajanagar | ಹುಟ್ಟೂರಿನ ಮಣ್ಣಲ್ಲಿ ಧ್ರುವನಾರಾಯಣ್ ಲೀನ – ರಾಜಕೀಯದ ಅಜಾತಶತ್ರು ಇನ್ನು ನೆನಪು ಮಾತ್ರ

Chamarajanagar

ಹುಟ್ಟೂರಿನ ಮಣ್ಣಲ್ಲಿ ಧ್ರುವನಾರಾಯಣ್ ಲೀನ – ರಾಜಕೀಯದ ಅಜಾತಶತ್ರು ಇನ್ನು ನೆನಪು ಮಾತ್ರ

Public TV
Last updated: March 12, 2023 6:15 pm
Public TV
Share
2 Min Read
CNG DHRUVANARAYAN
SHARE

ಚಾಮರಾಜನಗರ: ಜನ ಸೇವಕ, ರಾಜಕಾರಣಿ ಆರ್.ಧ್ರುವನಾರಾಯಣ್ (R.Dhruvanarayan) ಇನ್ನು ನೆನಪು ಮಾತ್ರ. ಮಾರ್ಚ್ 11ರಂದು ಹೃದಯಾಘಾತದಿಂದ ನಿಧನರಾದ ಧ್ರುವನಾರಾಯಣ್ ಅವರ ಅಂತ್ಯಕ್ರಿಯೆ (Funeral) ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಾದ ಚಾಮರಾಜನಗರ (Chamarajanagara) ಜಿಲ್ಲೆಯ ಹೆಗ್ಗವಾಡಿಯಲ್ಲಿ (Heggavadi) ನೆರವೇರಿತು. ನೂರಾರು ಗಣ್ಯರು, ಸಹಸ್ರಾರು ಜನರ ಅಶ್ರುತರ್ಪಣದೊಂದಿಗೆ ಧ್ರುವನಾರಾಯಣ್ ಮಣ್ಣಲ್ಲಿ ಲೀನವಾದರು.

ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದ ಚಾಮರಾಜನಗರ ಮಾಜಿ ಸಂಸದ, ಕೆಪಿಸಿಸಿ (KPCC) ಮಾಜಿ ಅಧ್ಯಕ್ಷ ಆರ್.ಧ್ರುವನಾರಾಯಣ್ ಅವರ ಯುಗಾಂತ್ಯವಾಗಿದೆ. ಶನಿವಾರ ನಿಧನರಾದ ಆರ್.ಧ್ರುವನಾರಾಯಣ ಅವರ ಪಾರ್ಥಿವ ಶರೀರವನ್ನು ಮೈಸೂರಿನಿಂದ (Mysuru) ಚಾಮರಾಜನಗರ ಜಿಲ್ಲೆ ಹೆಗ್ಗವಾಡಿ ಗ್ರಾಮಕ್ಕೆ ಮಧ್ಯರಾತ್ರಿ ತರಲಾಗಿತ್ತು. ತಡರಾತ್ರಿಯಾದರೂ ದಾರಿಯುದ್ದಕ್ಕೂ ಗ್ರಾಮ ಗ್ರಾಮಗಳಲ್ಲಿ ಕಾದು ನಿಂತಿದ್ದ ಸಹಸ್ರಾರು ಸಾರ್ವಜನಿಕರು ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ಸ್ವಾಮೀಜಿ ಮಾತು ನಂಬಿ ಶನಿ ದೇವರಿಗೆ ಮಾಂಸದ ಹಾರ ತಂದಿದ್ದ ವ್ಯಕ್ತಿ ಅರೆಸ್ಟ್

CNG DHRUVANARAYAN 2

ಧ್ರುವನಾರಾಯಣ್ ಅವರ ಪಾರ್ಥಿವ ಶರೀರವನ್ನು ಹೆಗ್ಗವಾಡಿಯಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ತ್ರಿವರ್ಣಧ್ವಜ ಹೊದಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕೊನೆಯ ಬಾರಿ ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಬೆಳಗಿನ ಜಾವದಿಂದಲೇ ಅಪಾರ ಜನಸಾಗರ ಹರಿದುಬಂದಿತ್ತು. ಮಧ್ಯಾಹ್ನದವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಿದ ನಂತರ ಧ್ರುವನಾರಾಯಣ್ ಅವರ ತೋಟದಲ್ಲಿ ತಮ್ಮ ತಂದೆ ತಾಯಿ ಸಮಾಧಿ ಪಕ್ಕದಲ್ಲೇ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಮೃತರ ಗೌರವಾರ್ಥ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ರಾಷ್ಟ್ರಗೀತೆ ನುಡಿಸಿ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಬಳಿಕ ಧ್ರುವನಾರಾಯಣ್ ಅವರ ತಂದೆ ತಾಯಿ ಸಮಾಧಿ ಪಕ್ಕದಲ್ಲೇ ಹಿಂದೂ ಸಂಪ್ರದಾಯದಂತೆ ಮಣ್ಣು ಮಾಡಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದನ್ನೂ ಓದಿ: ಉದ್ಘಾಟನೆ ದಿನವೇ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ

CNG DHRUVANARAYAN 1

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಮಾಜಿ ಸಚಿವರಾದ ಪರಮೇಶ್ವರ್, ದಿನೇಶ್ ಗುಂಡೂರಾವ್ ಸೇರಿದಂತೆ ಅಸಂಖ್ಯಾತ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಗಲಿದ ನಾಯಕನಿಗೆ ಅಶ್ರುತರ್ಪಣ ಸಲ್ಲಿಸಿದರು. ಇದನ್ನೂ ಓದಿ: JDS ಕಾರ್ಯಕರ್ತರಿಗೆ ಭರ್ಜರಿ ಬಾಡೂಟ -ನಾನು ರಾಮನಗರದಲ್ಲೇ ಮಣ್ಣಾಗೋದು ಎಂದ HDK

ಇದೇ ವೇಳೆ ಧ್ರುವನಾರಾಯಣ್ ಪುತ್ರ ದರ್ಶನ್ ಅವರಿಗೆ ನಂಜನಗೂಡು (Nanjangudu) ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಅಭಿಮಾನಿಗಳು ರಾಜ್ಯ ಕಾಂಗ್ರೆಸ್ (Congress) ನಾಯಕರ ಮುಂದೆ ಒತ್ತಾಯ ಮಾಡಿದರು.

CNG DHRUVNARAYAN

ಆಶಾಕಿರಣವಾಗಿ ರಾಜಕೀಯ ಕ್ಷೇತ್ರದಲ್ಲಿ ಮಿಂಚಿ ಮರೆಯಾದ ಧ್ರುವನಾರಾಯಣ್‌ಗೆ ಸಹಸ್ರಾರು ಜನ ಅಶ್ರುತರ್ಪಣಗೈದು ಬೀಳ್ಕೊಟ್ಟರು. ಇದರೊಂದಿಗೆ ರಾಜಕೀಯ ಕ್ಷೇತ್ರದಲ್ಲಿ ಧ್ರುವತಾರೆಯಾಗಿ, ದೀನದಲಿತರ, ನೊಂದವರ ದನಿಯಾಗಿದ್ದ ಧ್ರುವನಾರಾಯಣ್ ಅವರ ಯುಗಾಂತ್ಯವಾದದ್ದು ತುಂಬಲಾರದ ನಷ್ಟವೇ ಸರಿ. ಇದನ್ನೂ ಓದಿ: ಮೋದಿಗೆ ಬೆಲ್ಲದ ಉಡುಗೊರೆ ನೀಡಿ ಮುಖದಲ್ಲಿ ಮಂದಹಾಸ ತರಿಸಿದ ಸಂಸದೆ ಸುಮಲತಾ

TAGGED:ChamarajanagaracongressHeggavadiKPCCR. Dhruvanarayanಆರ್.ಧ್ರುವನಾರಾಯಣ್ಕಾಂಗ್ರೆಸ್ಕೆಪಿಸಿಸಿಚಾಮರಾಜನಗರಹೆಗ್ಗವಾಡಿ
Share This Article
Facebook Whatsapp Whatsapp Telegram

Cinema news

ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories
ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories

You Might Also Like

PM Modi 4
Latest

ಇದು ನನ್ನ ಕೊನೆಯ ರ‍್ಯಾಲಿ, ಫಲಿತಾಂಶದ ನಂತರ ಪ್ರಮಾಣವಚನ ಸಮಾರಂಭಕ್ಕೆ ಬರುತ್ತೇನೆ: ಪ್ರಧಾನಿ ಮೋದಿ

Public TV
By Public TV
15 minutes ago
ragging alleged in hassan veterinary college hostel
Crime

ಹಾಸನದ ಪಶು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‍ನಲ್ಲಿ ರ‍್ಯಾಗಿಂಗ್‌ ಮಾರಾಮಾರಿ – ಹಲವರಿಗೆ ಗಾಯ

Public TV
By Public TV
27 minutes ago
Donald Trump 1
Latest

3 ದಿನಗಳ ಒಳಗಡೆ ಒಪ್ಪಿಕೊಳ್ಳಿ – ಇಲ್ಲದಿದ್ದರೆ ತೈಲ ಪೈಪ್‌ಲೈನ್‌ಗಳು ಸ್ಫೋಟಗೊಳ್ಳುತ್ತೆ: ಇರಾನಿಗೆ ಟ್ರಂಪ್‌ ವಾರ್ನಿಂಗ್‌

Public TV
By Public TV
1 hour ago
The Madhya Pradesh ministers brother abused and threatened the woman officer
Crime

ʻನಿನ್ನ ಹೂತು ಹಾಕ್ಬಿಡ್ತೀನಿʼ – ಸಚಿವರ ಸಹೋದರನಿಂದ ಮಹಿಳಾ ಅಧಿಕಾರಿಗೆ ಬೆದರಿಕೆ

Public TV
By Public TV
2 hours ago
Chinnaswamy Stadium 1
Bengaluru City

ಚಿನ್ನಸ್ವಾಮಿ ಭದ್ರತಾ ಲೋಪ ಕೇಸ್‌ಗೆ ಟ್ವಿಸ್ಟ್‌ – ಸಂಬಳ ನೀಡದ್ದಕ್ಕೆ ಆರ್‌ಸಿಬಿ ಮ್ಯಾಚ್ ದಿನವೇ ಸೇಡು ತೀರಿಸಿಕೊಂಡ ಸಿಬ್ಬಂದಿ!

Public TV
By Public TV
2 hours ago
Ashok Pattan
Bengaluru City

ಮೇ 2ನೇ ವಾರದಲ್ಲಿ ಸಿಹಿ ಸುದ್ದಿ ಕೊಡುವ ಭರವಸೆ ಹೈಕಮಾಂಡ್ ಕೊಟ್ಟಿದೆ: ಅಶೋಕ್ ಪಟ್ಟಣ್

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?