ಮುಂಬೈ: ಉದ್ಯಮಿ ಪುತ್ರನ ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಕೊಲೆ ಮಾಡಿ ಜೈಲಲ್ಲಿರುವ ಭಾವಿ ಪತ್ನಿ ಮತ್ತು ಆಕೆಯ ಪ್ರಿಯಕರ ಈಗ ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಕೇತನ್ ಅಗರ್ವಾಲ್ (Ketan Agarwal) ಹತ್ಯೆಗೆ ಸಿಯಾಳೆ ಪ್ಲ್ಯಾನ್ ಮಾಡಿದ್ದು ಅಂತ ಪ್ರಿಯಕರ ಆರೋಪಿಸಿದ್ದಾನೆ. ಆದರೆ, ಕೇತನ್ ಕೊಲೆಗೆ ನನ್ನ ಪ್ರಿಯಕರನೇ ಒತ್ತಾಯ ಮಾಡಿದ್ದು ಎಂದು ಸಿಯಾ (Siya Goyal) ಆರೋಪಿಸಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ಒಬ್ಬರ ಮೇಲೊಬ್ಬರು ಆರೋಪ ಹೊರಿಸುತ್ತಿದ್ದಾರೆ. ಇದನ್ನೂ ಓದಿ: ನನ್ನ ಮಗಳು ತಪ್ಪು ಮಾಡಿದ್ರೆ ಅದೇ ಕೋಟೆಯಿಂದ ತಳ್ಳಿ ಬಿಡಿ – ಸಿಯಾ ಪೋಷಕರ ಆಕ್ರೋಶ

ಜೂನ್ 18 ರಂದು ಲೋಹಗಡ್ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವ ಪುಣೆ ಗ್ರಾಮೀಣ ಪೊಲೀಸರು, ತಮ್ಮ ಕಸ್ಟಡಿ ವಿಚಾರಣೆಯಲ್ಲಿ ಪರಸ್ಪರರು ಕೊಲೆ ಆರೋಪವನ್ನು ಹೊರಲು ಸಿದ್ಧರಿಲ್ಲದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು, ಇಲ್ಲಿಯವರೆಗೆ ಸಂಗ್ರಹಿಸಿದ ಪುರಾವೆಗಳು ಗೋಯಲ್ ಅವರೇ ಆರೋಪಿ ಮಾಸ್ಟರ್ ಮೈಂಡ್ ಎಂದು ಸೂಚಿಸುತ್ತವೆ ಎಂದಿದ್ದಾರೆ. ಇದನ್ನೂ ಓದಿ: 2,004 ಫೋನ್ ಕಾಲ್, 238 ಗಂಟೆ ಮಾತುಕತೆ – ಭಾವಿ ಪತಿ ಕೊಲೆಗೆ ಪ್ರಿಯಕರನ ಜೊತೆ ಕೆಫೆಯಲ್ಲಿ ನಡೆದಿತ್ತು ಸಂಚು
ಅಗರ್ವಾಲ್ ಮತ್ತು ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವರ್ಷದ ಕೊನೆಯಲ್ಲಿ ಮದುವೆಯಾಗಲು ನಿರ್ಧರಿಸಲಾಗಿತ್ತು. ಅಗರ್ವಾಲ್ ಬಳಿ ಮದುವೆಯನ್ನು ಮುಂದುವರಿಸಲು ಇಷ್ಟವಿಲ್ಲ ಎಂದು ಪದೇ ಪದೇ ಹೇಳಿದ್ದೆ. ಆದರೆ, ಆತ ಅದನ್ನು ರದ್ದುಗೊಳಿಸಲು ನಿರಾಕರಿಸಿದ್ದ ಎಂದು ಗೋಯಲ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
