Connect with us

Dakshina Kannada

ಮುಖದ ಮೇಲೆ ಜೇನು ಬಿಟ್ಟುಕೊಂಡರೂ ಕಚ್ಚಲ್ಲ- ಜೇನು ಸಾಕಾಣೆಯಲ್ಲಿ ಪರಿಣತಿ ಹೊಂದಿರೋ ಮಂಗಳೂರಿನ ಕುಮಾರ್

Published

on

ಮಂಗಳೂರು: ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸ್ವಲ್ಪ ಭಿನ್ನವಾಗಿದ್ದಾರೆ. ಸಾಮಾನ್ಯವಾಗಿ ಜೇನುನೋಣ ಅಂದ್ರೆ ಅಯ್ಯಯ್ಯೋ ಅಂತ ಓಡೋವ್ರೋ ಜಾಸ್ತಿ. ಆದರೆ ಮಂಗಳೂರಿನ ನಮ್ಮ ಪಬ್ಲಿಕ್ ಹೀರೋಗೆ ಜೇನುನೊಣಗಳು ಅಂದರೆ ಬಲು ಪ್ರೀತಿ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಣ ಮುಡ್ನೂರು ಗ್ರಾಮದ ನಿವಾಸಿ ಕುಮಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಕೃಷಿಕರಾಗಿರೋ ಕುಮಾರ್ ವಿವಿಧ ಬೆಳೆಗಳ ಜೊತೆಗೆ ಜೇನು ಉತ್ಪಾದನೆಯಲ್ಲೂ ಸಾಧನೆ ಮಾಡಿದ್ದಾರೆ. ಕೇವಲ ಆದಾಯದ ಮಾತ್ರವಲ್ಲದೆ ಜೇನುನೊಣಗಳನ್ನೂ ಅಷ್ಟೇ ಪ್ರೀತಿಯಿಂದ ಸಾಕುತ್ತಾರೆ. ಜೇನುನೊಣಗಳನ್ನು ತಮ್ಮ ಮುಖದಲ್ಲಿ ಕುಳ್ಳಿರಿಸಿಕೊಂಡರೂ ಜೇನುನೊಣಗಳು ಕಚ್ಚೋದಿಲ್ಲ.

ಭೀತಿಯಿಲ್ಲದೆ ಜೇನುಗೂಡಿಗೆ ಕೈ ಹಾಕಿ ವಿದೇಶಿಗರನ್ನೂ ಮೀರಿಸುವಂತೆ ತಮ್ಮ ಮುಖದ ಮೇಲೆ ಜೇನುನೊಣಗಳನ್ನ ಬಿಟ್ಟುಕೊಳ್ಳುತ್ತಾರೆ. ರಾಣಿ ನೊಣವನ್ನು ಗಡ್ಡದ ಮೇಲೆ ಕೂರಿಸಿಕೊಂಡರೆ ಉಳಿದ ಎಲ್ಲಾ ನೊಣಗಳು ಆವರಿಸಿಕೊಳ್ಳುತ್ತವೆ ಅನ್ನೋ ಕುಮಾರ್ ಜೇನುಪ್ರೀತಿಗೆ ಕುಟುಂಬವೂ ಸಾಥ್ ಕೊಟ್ಟಿದೆ.

25 ಜೇನುಗೂಡು ಹೊಂದಿರುವ ಕುಮಾರ್ ಪೆರ್ನಾಜೆ ಅವ್ರು ಮಿಶ್ರಣ ರಹಿತ ಶುದ್ಧ ಜೇನನ್ನ ಮಾರುಕಟ್ಟೆಗೆ ನೀಡ್ತಾರೆ. ಅಂದಹಾಗೆ, ಈ ದೃಶ್ಯವನ್ನ ನೋಡಿದರೂ ಪರಿಣತಿ ಇಲ್ಲದವರು ಯಾರೂ ಪ್ರಯತ್ನಿಸಬೇಡಿ ಅಂತ ಮನವಿ ಮಾಡಿದ್ದಾರೆ.

https://www.youtube.com/watch?v=8sCXVM86ds0

 

Click to comment

Leave a Reply

Your email address will not be published. Required fields are marked *