ಪತ್ನಿಗೆ ಚಾಕು ಇರಿಯಲು ಮುಂದಾದ ಪತಿಗೆ ಸಾರ್ವಜನಿಕರಿಂದ ಧರ್ಮದೇಟು

1 Min Read

ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಪತ್ನಿಗೆ ಚಾಕು ಇರಿಯಲು ಮುಂದಾದ ಪತಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಬೆಂಗಳೂರಿನ (Bengaluru) ಮಾದನಾಯಕನಹಳ್ಳಿಯ (Madanayakanahalli) ದಾಸನಪುರದಲ್ಲಿ ನಡೆದಿದೆ.

ಪತಿ ಸಂಜಯ್ ಪತ್ನಿಗೆ ಚಾಕು ಇರಿಯಲು ಮುಂದಾದಾಗ ಸಾರ್ವಜನಿಕರು ರಕ್ಷಣೆ ಮಾಡಿ, ಧರ್ಮದೇಟು ನೀಡಿದ್ದಾರೆ. ಹಿಗ್ಗಾಮುಗ್ಗ ಥಳಿತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಪಿಎಗೆ ಗುಂಡಿಕ್ಕಿ ಹತ್ಯೆ

ಸಂಜಯ್ ಎರಡನೇ ಮದುವೆಯಾಗಿದ್ದ. ಆದರೆ ಕುಡಿತದ ಚಟದಿಂದಾಗಿ ಎರಡನೇ ಪತ್ನಿ ಆತನನ್ನು ಬಿಟ್ಟು ಹೋಗಿ, ಪ್ರತ್ಯೇಕವಾಗಿ ವಾಸವಾಗಿದ್ದಳು. ಘಟನೆ ದಿನ ನಡೆದ ಪತ್ನಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಪತಿ ಏಕಾಏಕಿ ಅಡ್ಡಗಟ್ಟಿ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಪತ್ನಿಯನ್ನು ರಕ್ಷಣೆ ಮಾಡಿ, ಪತಿಗೆ ಥಳಿಸಿದ್ದಾರೆ.

ಸದ್ಯ ಪತಿಯನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದು, ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.ಇದನ್ನೂ ಓದಿ: ಡಿಎಂಕೆ ಮೈತ್ರಿಯಿಂದ ಹೊರಬಂದ ಕಾಂಗ್ರೆಸ್ – ಇದು ವಿಶ್ವಾಸ ದ್ರೋಹವೆಂದ ಸ್ಟಾಲಿನ್ ಪಕ್ಷ

Share This Article