ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ನಡೆದ ಭೀಕರ ಗುಡ್ಡ ಕುಸಿತದಲ್ಲಿ (Kerala) ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಸುದ್ದಿ ಕೊಪ್ಪಳ ಜಿಲ್ಲೆಯ (Koppal) ಕಾರಟಗಿ ತಾಲೂಕಿನ ಕಕ್ಕರಗೊಳ ಗ್ರಾಮದಲ್ಲಿ (shivamogga) ಶೋಕದ ವಾತಾವರಣ ಮೂಡಿಸಿದೆ.
ಕೂಲಿ ಕೆಲಸಕ್ಕಾಗಿ ತೀರ್ಥಹಳ್ಳಿಗೆ ತೆರಳಿದ್ದ ಮಗ, ಸೊಸೆ ಮತ್ತು ಮೊಮ್ಮಗ ಮರಳಿ ಮನೆಗೆ ಬಾರದಿರುವುದು ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ದುಃಖ ತಾಳಲಾರದೆ ಮನೆಯ ಮುಂದೆ ಕುಳಿತಿರುವ ತಂದೆ ಲಕ್ಷ್ಮಣ ಕಣ್ಣೀರು ಹಾಕುತ್ತಾ ಮಗನ ನೆನಪಿನಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ಗ್ರಾಮದ ಜನರು ಕೂಡ ಕುಟುಂಬದ ನೋವನ್ನು ಕಂಡು ಕಣ್ಣೀರಾಗಿದ್ದಾರೆ. ಸಂಬಂಧಿಕರು ಮತ್ತು ನೆರೆಹೊರೆಯವರು ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಪ್ರಯತ್ನಿಸುತ್ತಿದ್ದರೂ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವು ಮಾತ್ರ ಕಡಿಮೆಯಾಗುತ್ತಿಲ್ಲ.ಇದನ್ನೂ ಓದಿ: ನಿವೃತ್ತಿಯಾದರೂ ಅಜಿಂಕ್ಯ ರಹನೆಗೆ ಸಿಗಲಿದೆ ಬಿಸಿಸಿಐ ಪಿಂಚಣಿ
ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಈ ಕುಟುಂಬದ ದುರಂತ ಅಂತ್ಯ ಗ್ರಾಮಸ್ಥರ ಮನಸ್ಸನ್ನು ಮಿಡಿಯುವಂತೆ ಮಾಡಿದೆ. ಒಂದೇ ಕ್ಷಣದಲ್ಲಿ ಮನೆಯ ಮೂರು ಜೀವಗಳು ಕಣ್ಮರೆಯಾಗಿರುವುದು ಇಡೀ ಗ್ರಾಮವನ್ನು ದುಃಖದಲ್ಲಿ ಮುಳುಗಿಸಿದೆ.ಇದನ್ನೂ ಓದಿ: ಟಾರ್ಗೆಟ್ ಸುವೇಂದು ಅಧಿಕಾರಿ, ಪೊಲೀಸರಂತೆ ಜಂತರ್ ಮಂತರ್‌ಗೆ ನುಸುಳಲು ಸಂಚು – ಬಂಧಿತ ಉಗ್ರ ಬಾಯ್ಬಿಟ್ಟಿದ್ದೇನು?
