ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟದಿಂದ ಕಾಂಗ್ರೆಸ್ ಹೊರಬಂದಿದೆ. ಬಹುಕಾಲದ ಮಿತ್ರನಿಗೆ ಕಾಂಗ್ರೆಸ್ ಕೈ ಕೊಟ್ಟಿದೆ. ವಿಜಯ್‌ಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ವಿರುದ್ಧ ಡಿಎಂಕೆ ಕೆಂಡಕಾರಿದೆ.
ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ, ಕಾಂಗ್ರೆಸ್ ಬೆನ್ನಿಗೆ ಚೂರಿ ಇರಿಯುವವರಂತೆ ವರ್ತಿಸುತ್ತಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಕೇಂದ್ರ ನಾಯಕತ್ವವೇ ತೆಗೆದುಕೊಳ್ಳುವಾಗ ಈ ನಿರ್ಧಾರವನ್ನು ಮಾತ್ರ ಸ್ಥಳೀಯ ಘಟಕಕ್ಕೆ ಬಿಟ್ಟಿದ್ದು ಹೇಗೆ ಎಂದು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಲ್ಲಿ ಡಿಎಂಕೆ-ಎಐಎಡಿಎಂಕೆ ಮೈತ್ರಿ ಆಗುತ್ತಾ? – ವಿಜಯ್‌ಗೆ ಶಾಕ್?
ಈ ಮಧ್ಯೆ ಸೂಪರ್‌ಸ್ಟಾರ್ ರಜಿನಿಕಾಂತ್, ಸ್ಟಾಲಿನ್ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ಇನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ದಿವಂಗತ ಕರುಣಾನಿಧಿ ಅವರ ಹಳೆಯ ಫೋಟೋವನ್ನು ಹಂಚಿಕೊಂಡಿದ್ದು, ಆ ಫೋಟೋದಲ್ಲಿ ಕರುಣಾನಿಧಿ ಹಿಂದೆ ವಿಜಯ್ ಇದ್ದಾರೆ. ಇದನ್ನ ಉಲ್ಲೇಖಿಸಿ ಕಲೈನಾರ್ ಅವರ ಹಿಂದೆ ನಿಂತಿರುವ ಹುಡುಗ ಮುಂದೊಂದು ದಿನ ತಮ್ಮ ಪಕ್ಷವನ್ನು ನಾಶಮಾಡುತ್ತಾನೆ ಎಂದು ಕರುಣಾನಿಧಿ ಅವರು ಕನಸು ಮನಸ್ಸಿನಲ್ಲೂ ಭಾವಿಸಿರಲಿಲ್ಲ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು, ಟಿವಿಕೆ ಜೊತೆಗಿನ ಹೊಸ ಮೈತ್ರಿಯನ್ನು ಸಮರ್ಥಿಸಿಕೊಂಡು ಕಾಂಗ್ರೆಸ್ ಕಾರಣಗಳನ್ನು ಕೊಟ್ಟಿದೆ.

