ತೈಪೆ: ಭಾರತದ 17 ವರ್ಷದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ತನ್ವಿ ಶರ್ಮಾ(Tanvi Sharma) ತೈಪೆ ಓಪನ್ ಟೂರ್ನಿಯಲ್ಲಿ(Taipei Open Super 300) ವಿಶ್ವದ 21ನೇ ಶ್ರೇಯಾಂಕಿತ ಆಟಗಾರ್ತಿ ನ್ಗುಯೆನ್ (Nguyen) ಅವರನ್ನು 21-16, 21-16 ನೇರ ಸೆಟ್‌ಗಳಿಂದ ಮಣಿಸಿ ಐತಿಹಾಸಿಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಕೇವಲ 36 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡ ತನ್ವಿ ಕ್ರೀಡಾಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ತನ್ವಿ ಶರ್ಮಾ (17 ವರ್ಷ 222 ದಿನಗಳು) ತೈಪೆ ಓಪನ್ ಇತಿಹಾಸದಲ್ಲೇ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ತೈ ತ್ಸು ಯಿಂಗ್ (Tai Tzu Ying) ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದ್ದಾರೆ.

2008ರಲ್ಲಿ ಸೈನಾ ನೆಹ್ವಾಲ್ ಈ ಟ್ರೋಫಿ ಗೆದ್ದ ನಂತರ ತೈಪೆ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ತನ್ವಿ ಭಾಜನರಾಗಿದ್ದಾರೆ.
ಐತಿಹಾಸಿಕ ಗೆಲುವಿನ ಬಳಿಕ ಮಾತನಾಡಿದ ತನ್ವಿ, “ಈ ಪ್ರಶಸ್ತಿ ಗೆದ್ದಿರುವುದು ನನಗೆ ತುಂಬಾ ಸಂತಸ ತಂದಿದೆ. ನಾನು ಪ್ರಶಸ್ತಿ ಗೆಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ, ಆದರೆ ಪ್ರತಿ ಪಂದ್ಯದಲ್ಲೂ ನನ್ನ 100% ಶ್ರಮ ನೀಡಬೇಕೆಂದುಕೊಂಡಿದ್ದೆ. ಪಂದ್ಯದಿಂದ ಪಂದ್ಯಕ್ಕೆ ಹಂತ ಹಂತವಾಗಿ ಸಾಗಿದೆ” ಎಂದು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಿವೃತ್ತಿಯಾದರೂ ಅಜಿಂಕ್ಯ ರಹನೆಗೆ ಸಿಗಲಿದೆ ಬಿಸಿಸಿಐ ಪಿಂಚಣಿ
Couldn’t be prouder of this girl. ❤️
I’ve been saying for years that Tanvi has all the ingredients to become a very special player. The talent, the stroke-making, the courage to take on the best, it’s all there. The only thing she needed was a little more stability and… https://t.co/i3iIxUpNQM pic.twitter.com/Rrnv9pusL6
— PV Sindhu (@Pvsindhu1) August 2, 2026
ಪಂಜಾಬ್‌ನ ಹೊಷಿಯಾರ್‌ಪುರ ಮೂಲದ ತನ್ವಿ, ಮಾಜಿ ರಾಷ್ಟ್ರೀಯ ವೊಲಿಬಾಲ್ ಆಟಗಾರ್ತಿಯಾಗಿರುವ ತಮ್ಮ ತಾಯಿ ಮೀನಾ ಶರ್ಮಾ ಅವರಿಂದ ಬ್ಯಾಡ್ಮಿಂಟನ್ ತರಬೇತಿ ಪಡೆದ್ದರು. ಈ ಹಿಂದೆ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಹಾಗೂ ಏಷ್ಯನ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ತನ್ವಿ, ಈಗ ಹಿರಿಯರ ವಿಭಾಗದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ.
ತನ್ವಿ ಅವರ ಈ ಐತಿಹಾಸಿಕ ಸಾಧನೆಗೆ ಭಾರತದ ಪ್ರಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅಭಿನಂದನೆ ಸಲ್ಲಿಸಿದ್ದಾರೆ.
17-year-old Tanvi Sharma 🇮🇳 goes for gold against Nguyen Thuy Linh 🇻🇳.#BWFWorldTour #TaipeiOpen2026 pic.twitter.com/QUlZuTSRUc
— BWF (@bwfmedia) August 2, 2026
