ಲಿಮಾ: ಪೆರುವಿನ (Peru) ನಾಜ್ಕಾ ನಗರದ ಹೊರಗೆ ಪ್ರವಾಸಿಗರಿದ್ದ ವಿಮಾನ ಪತನಗೊಂಡಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ.
ರಾಜಧಾನಿ ಲಿಮಾದಿಂದ ದಕ್ಷಿಣಕ್ಕೆ ಸುಮಾರು 240 ಕಿಲೋಮೀಟರ್ ದೂರದಲ್ಲಿರುವ ಪಿಸ್ಕೋ ವಿಮಾನ ನಿಲ್ದಾಣದಿಂದ ವಿಮಾನವು ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಇಂಡೋನೇಷ್ಯಾ | 271 ಜನರಿದ್ದ ಫೆರ‍್ರಿಯಲ್ಲಿ ಅಗ್ನಿ ಅವಘಡ – ಐವರು ಸಾವು, 41 ಮಂದಿ ನಾಪತ್ತೆ
11 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅಪಘಾತದ ತೀವ್ರತೆ ಗಮಿಸಿದರೆ, ಯಾರು ಕೂಡ ಬದುಕುಳಿದಂತೆ ತೋರುತ್ತಿಲ್ಲ. ಇದುವರೆಗೆ 4 ಶವಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸ್ ಮೇಜರ್ ಜಾರ್ಜ್ ಆಂಡ್ರೇಡ್ ತಿಳಿಸಿದ್ದಾರೆ.
ವಿಮಾನ ಪತನಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಪೆರುವಿನ ನಾಗರಿಕ ವಿಮಾನಯಾನ ಪ್ರಾಧಿಕಾರವು ತನಿಖೆ ನಡೆಸಲಿದ್ದು, ಏಜೆಂಟರು ಈಗಾಗಲೇ ಸ್ಥಳದಲ್ಲಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ತಿಂಗಳಿಗೆ 95 ಲಕ್ಷ ನೀಡಿ, ಎಕ್ಸ್‌ಕ್ಲೂಸಿವ್ ಮಾಹಿತಿ ಪಡೆಯಿರಿ – ಟ್ರೂತ್ ಪೋಸ್ಟ್‌ನಿಂದ ಕೋಟಿ ಗಳಿಕೆಗೆ ಇಳಿದ ಟ್ರಂಪ್
ಮೃತರ ಪೈಕಿ 11 ಪ್ರಯಾಣಿಕರು ವಿದೇಶಿಗರು ಎಂದು ವಿದೇಶಿ ವ್ಯವಹಾರ ಸಚಿವಾಲಯ ತಿಳಿಸಿದೆ. ಏಳು ಮಂದಿ ಇಟಾಲಿಯನ್ನರು, ಇಬ್ಬರು ಜರ್ಮನ್ನರು ಮತ್ತು ಇಬ್ಬರು ಸ್ಪೇನ್ ದೇಶದವರು ಸಾವನ್ನಪ್ಪಿದ್ದಾರೆ.
