Bengaluru CityDistrictsKarnatakaLatestLeading NewsMain Post

ಪಿಎಸ್‌ಐ ಅಕ್ರಮ – ಮಾಜಿ ಸಿಎಂ ಪುತ್ರನ ವಿರುದ್ಧ ದೂರು

ಬೆಂಗಳೂರು: ಪಿಎಸ್‌ಐ(ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌) ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮಾಜಿ ಮುಖ್ಯಮಂತ್ರಿ ಮಗನ ಮೇಲೆ ದೂರು ದಾಖಲಾಗಿದೆ.

ಭ್ರಷ್ಟಾಚಾರದ ವಿರುದ್ಧ ನಾವು ಸಂಘಟನೆಯ ಪರವಾಗಿ ವಕೀಲರು ಸಿಐಡಿಗೆ ದೂರು ನೀಡಿದ್ದಾರೆ. ಹೆಸರನ್ನು ಸೂಚಿಸದೇ, ಮಾಜಿ ಮುಖ್ಯಮಂತ್ರಿ ಮಗ ಎಂದು ಆರೋಪ ಮಾಡಲಾಗಿದೆ. ಇದನ್ನೂ ಓದಿ: ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಚಿತ್ರಕ್ಕೆ ಕಂಟಕ

PSI KINGPIN

ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಯ ಪುತ್ರನ ಕೈವಾಡವಿದೆ ಎಂದು ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ. ಮಗ ಕೂಡ ಈ ಹಗರಣದಲ್ಲಿ ತೊಡಗಿರುವ ಬಗ್ಗೆ ರಾಜ್ಯಾದ್ಯಂತ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಆರೋಪಿಸಿದ್ದು ಅವರನ್ನು ವಿಚಾರಣೆ ಕರೆತರಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಧನುಷ್ ತಮ್ಮ ಮಗ ಅಂತ ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ: ನಟನಿಗೆ ಮದ್ರಾಸ್ ಕೋರ್ಟ್ ಸಮನ್ಸ್

ಪಿಎಸ್‌ಐ ಅಕ್ರಮದಲ್ಲಿ ಅಭ್ಯರ್ಥಿಗಳು ಮಧ್ಯವರ್ತಿಗಳನ್ನು ಮಾತ್ರ ಸಿಐಡಿ ವಿಚಾರಣೆ ನಡೆಸುತ್ತಿದೆ. ಆದರೆ ಹಣಪಡೆದಿರುವ ದೊಡ್ಡ ವ್ಯಕ್ತಿಗಳು, ಐಪಿಎಸ್‌ ಅಧಿಕಾರಿಗಳನ್ನು ವಿಚಾರಣೆ ನಡೆಸಿಲ್ಲ. ರಾಜ್ಯದ ಪ್ರಭಾವಿ ಸಚಿವ ಅಶ್ವಥ್‌ ನಾರಾಯಣ, ಪೊಲೀಸ್‌ ಅಧಿಕಾರಿ ಅಮೃತಪಾಲ್‌ ಮತ್ತು ಇತರ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಿಲ್ಲ. ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published.

Back to top button