ಮಡಿಕೇರಿ: ಕೊಡಗಿನ ಪ್ರವಾಸೋದ್ಯಮಕ್ಕೆ (Kodagu Tourism) ಮತ್ತೊಮ್ಮೆ ಚೈತನ್ಯ ಬಂದಿದೆ. ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆ ಕಳೆದ 4 ತಿಂಗಳಿನಿಂದ ಬಂದ್ ಆಗಿದ್ದ ಕೊಡಗಿನ ಜನಪ್ರತಿಯ ಪ್ರವಾಸಿ ತಾಣ ʻಮಾಂದಲ್‌ಪಟ್ಟಿʼ (Mandalpatti) ಪ್ರವಾಸಿಗರಿಗೆ ಮುಕ್ತವಾಗಿದೆ.
ಹಚ್ಚಹಸಿರ ಬೆಟ್ಟಗುಡ್ಡಗಳು, ಮಂಜಿನ ಹೊದಿಕೆ ಮತ್ತು ಆಫ್‌ರೋಡ್ ಜೀಪ್ ಸವಾರಿಗೆ ಹೆಸರುವಾಸಿಯಾಗಿರುವ ಈ ತಾಣ ಮತ್ತೆ ಪ್ರವಾಸಿಗರನ್ನ (Tourists) ಕೈಬೀಸಿ ಕರೆಯುತ್ತಿದೆ. ಇದನ್ನೂ ಓದಿ: ಜುಲೈ 9ರವರೆಗೆ ಕೊಡಗಿನ ಹೆದ್ದಾರಿಗಳಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

ಹೌದು. ಮಡಿಕೇರಿ ಹೊರವಲಯದಲ್ಲಿರುವ ಪ್ರಕೃತಿ ಸೌಂದರ್ಯದ ತಾಣ ಮಾಂದಲ್‌ಪಟ್ಟಿ ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ. ಮಾಂದಲ್‌ಪಟ್ಟಿಗೆ ಸಾಗುವ ರಸ್ತೆ ಮಾರ್ಗ ದುರಸ್ಥಿ ಕಾರ್ಯದಲ್ಲಿ ಇದ್ದರಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ 60 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಮಾಂದಲ್‌ಪಟ್ಟಿ ಮಾರ್ಗವನ್ನ ಪುನಃ ತೆರೆಯಲಾಗಿದೆ.
ಮಂಜಿನ ಹೊದಿಕೆಯ ನಡುವೆ ಕಾಣಿಸಿಕೊಳ್ಳುವ ಬೆಟ್ಟಗುಡ್ಡಗಳು, ತಂಪಾದ ವಾತಾವರಣ ಮತ್ತು ಪ್ರಕೃತಿಯ ಮೈಮಾಟದಿಂದ ಮಾಂದಲ್‌ಪಟ್ಟಿ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ವಿಶೇಷವಾಗಿ ಆಫ್‌ರೋಡ್ ಜೀಪ್ ಡ್ರೈವ್ ಅನುಭವಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ 40 ಅಡಿ ಕಂದಕಕ್ಕೆ ಉರುಳಿದ ಕಾರು – ಚಾಲಕ ಪಾರು

ಮಾಂದಲ್‌ಪಟ್ಟಿ (ಮುಗಿಲುಪೇಟೆ) ಗೆ ತೆರಳುವ ದಾರಿಯೇ ಒಂದು ವಿಶೇಷ ಅನುಭವ ನೀಡುತ್ತದೆ. ಬೆಟ್ಟದ ಮಧ್ಯೆ ಸಾಗುವ ಜೀಪ್ ಪ್ರಯಾಣ, ಮೇಲಿನಿಂದ ಕಾಣುವ ಬೆಟ್ಟಗಳ ಸಾಲು ಮತ್ತು ಮೋಡಗಳ ಆಟ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ರಸ್ತೆ ದುರಸ್ತಿ ಬಳಿಕ ಪ್ರವಾಸಿಗರಿಗೆ ಸುರಕ್ಷಿತ ಹಾಗೂ ಸುಗಮ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರವಾಸೋದ್ಯಮ ಚಟುವಟಿಕೆಗಳು ಮತ್ತೆ ಚುರುಕುಗೊಳ್ಳುವ ನಿರೀಕ್ಷೆ ಇದೆ. ಸ್ಥಳೀಯ ಜೀಪ್ ಚಾಲಕರು, ವ್ಯಾಪಾರಿಗಳು ಮತ್ತು ಪ್ರವಾಸೋದ್ಯಮ ಅವಲಂಬಿತ ಕುಟುಂಬಗಳಲ್ಲೂ ಸಂತಸ ಮನೆ ಮಾಡಿದೆ. ʻಕಳೆದ 4 ತಿಂಗಳಿನಿಂದ ರಸ್ತೆ ದುರಸ್ತಿ ಹಿನ್ನೆಲೆ ಬಂದ್ ಆಗಿದ್ದ ಕೊಡಗಿನ ಜನಪ್ರಿಯ ಪ್ರವಾಸಿ ತಾಣ ಮಾಂದಲ್‌ಪಟ್ಟಿ ಇದೀಗ ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ. ಉತ್ತಮ ರಸ್ತೆ, ಸುರಕ್ಷಿತ ಸಂಚಾರ ಹಾಗೂ ಪ್ರಕೃತಿಯ ಸೊಬಗಿನೊಂದಿಗೆ ಮತ್ತೆ ಸಾವಿರಾರು ಪ್ರವಾಸಿಗರನ್ನ ಸೆಳೆಯಲು ಮಾಂದಲ್‌ಪಟ್ಟಿ ಸಜ್ಜಾಗಿದೆ.
