ಬೆಂಗಳೂರು: ಸರ್ಕಾರಕ್ಕೆ ಜನೋತ್ಸವದ ಬದಲಾಗಿ ಜನಾಕ್ರೋಶದ ದರ್ಶನವಾಗಿದೆ ಜನೋತ್ಸವವನ್ನು ರದ್ದುಗೊಳಿಸಿದ್ದು ಜನರ ಆಕ್ರೋಶದ ಕಾರಣಕ್ಕೆ ಹೊರತು ಮೃತನ ಮೇಲಿನ ಗೌರವದಿಂದಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಹರಿಹಾಯ್ದಿದೆ.
Advertisement
ಟ್ವೀಟ್ನಲ್ಲಿ ಏನಿದೆ?:
ತಮ್ಮ ಸರ್ಕಾರದ ವೈಫಲ್ಯಗಳೇ ಮುಖ್ಯಮಂತ್ರಿಗಳ ನಿದ್ದೆಗೆಡುವಂತೆ ಮಾಡಿದೆ. ಜನರಿಗೆ ನಿದ್ದೆಗೆಡುವಂತ ಆಡಳಿತ ನೀಡಿದಾಗ ಜನರೂ ಸರ್ಕಾರದ ನಿದ್ದೆಗೆಡಿಸುತ್ತಾರೆ ಎನ್ನಲು ಮಧ್ಯರಾತ್ರಿಯ ಪತ್ರಿಕಾಗೋಷ್ಠಿಯೇ ಸಾಕ್ಷಿ. ಜನೋತ್ಸವವನ್ನು ರದ್ದುಗೊಳಿಸಿದ್ದು ಜನರ ಆಕ್ರೋಶದ ಕಾರಣಕ್ಕೆ ಹೊರತು ಮೃತನ ಮೇಲಿನ ಗೌರವದಿಂದಲ್ಲ. ಮಧ್ಯರಾತ್ರಿಯ ಯೂಟರ್ನ್ಗಳ ವೃತ್ತಾಂತಗಳು ಬಿಜೆಪಿ ಸರ್ಕಾರಕ್ಕೆ ಹೊಸದೇನೂ ಅಲ್ಲ. ಸರ್ಕಾರಿ ಕಚೇರಿಗಳಲ್ಲಿನ ಚಿತ್ರೀಕರಣ ವಿಷಯದಲ್ಲೂ ಸರ್ಕಾರ ಹೀಗೆಯೇ ಯೂಟರ್ನ್ನಾಗಿ ರಾತ್ರಿಯವರೆಗೂ ಕಾದಿತ್ತು. ಬಹುಶಃ ಈ ಸರ್ಕಾರಕ್ಕೆ ಜ್ಞಾನೋದಯವಾಗಲು ರಾತ್ರಿಯೇ ಆಗಬೇಕೇನೋ! ಜನೋತ್ಸವದ ಬದಲಾಗಿ ಜನಾಕ್ರೋಶದ ದರ್ಶನವಾಗಿದೆ ಈ ಸರ್ಕಾರಕ್ಕೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ತಂದೆ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು
Advertisement
Advertisement
ಸರ್ಕಾರದ ‘ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂಬ ಮಾತಿನ ಅಸಲಿ ಅರ್ಥ? ಜೈಲಿನಲ್ಲಿ ಗಾಂಜಾ ವ್ಯವಸ್ಥೆ ಮಾಡುತ್ತೇವೆ. ಮೊಬೈಲ್ ನೀಡುತ್ತೇವೆ. ಬಿರಿಯಾನಿ ನೀಡುತ್ತೇವೆ. ಮೋಜು ಮಸ್ತಿಗೆ ಸುವ್ಯವಸ್ಥೆ ಮಾಡಿಕೊಡುತ್ತೇವೆ! ಸರ್ಕಾರದ ಅಸಾಮರ್ಥ್ಯವನ್ನು ಸ್ವತಃ ಅವರ ಕಾರ್ಯಕರ್ತರೇ ಅರ್ಥ ಮಾಡಿಕೊಂಡಿದ್ದಾರೆ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಕಾಲೆಳೆದಿದೆ. ಇದನ್ನೂ ಓದಿ: ನಮ್ಮ ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ನಳಿನ್ ಕುಮಾರ್ ಕಟೀಲ್
Advertisement
'@BJP4Karnataka ಸರ್ಕಾರದ 'ಕಠಿಣ ಕ್ರಮ ಕೈಗೊಳ್ಳುತ್ತೇವೆ' ಎಂಬ ಮಾತಿನ ಅಸಲಿ ಅರ್ಥ????
◆ಜೈಲಿನಲ್ಲಿ ಗಾಂಜಾ ವ್ಯವಸ್ಥೆ ಮಾಡುತ್ತೇವೆ
◆ಮೊಬೈಲ್ ನೀಡುತ್ತೇವೆ
◆ಬಿರಿಯಾನಿ ನೀಡುತ್ತೇವೆ
◆ಮೋಜು ಮಸ್ತಿಗೆ ಸುವ್ಯವಸ್ಥೆ ಮಾಡಿಕೊಡುತ್ತೇವೆ!
ಸರ್ಕಾರದ ಅಸಾಮರ್ಥ್ಯವನ್ನು ಸ್ವತಃ ಅವರ ಕಾರ್ಯಕರ್ತರೇ ಅರ್ಥ ಮಾಡಿಕೊಂಡಿದ್ದಾರೆ.#JanaAkrosha
— Karnataka Congress (@INCKarnataka) July 28, 2022
ಇತ್ತ ಈವರೆಗೆ ಶಾಂತವಾಗಿದ್ದ ಕರಾವಳಿ ಪ್ರವೀಣ್ ಹತ್ಯೆಯ ಬಳಿಕ ಆಕ್ರೋಶ ಭುಗಿಲೆದ್ದಿದೆ. ಹಿಂದೂ ಕಾರ್ಯಕರ್ತರು ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ರಾಜ್ಯಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಕೇಳಿಬರುತ್ತಿದೆ. ಪರಿಸ್ಥಿತಿ ತಿಳಿಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ.