ChikkaballapurDistrictsKarnatakaLatestMain Post

ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡು ಪರಾರಿಗೆ ಯತ್ನ – ಬೈಕ್‍ಗಳ ನಡುವೆ ಸರಣಿ ಅಪಘಾತ

- ಇಬ್ಬರಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ: ರಸ್ತೆ ಮಧ್ಯೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಬೈಕ್ ಸವಾರನೋರ್ವ ಎರಡು ಬೈಕ್‍ಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ಚಿಂತಾಮಣಿ ನಗರದ ಬಾಗೇಪಲ್ಲಿ ಮಾರ್ಗದ ಸ್ಮಶಾನದ ಬಳಿ ಚಿಂತಾಮಣಿ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಂಚಾರ ಮಾಡುವ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದರು. ಈ ಸಲುವಾಗಿ ರಸ್ತೆ ಮಧ್ಯೆ ವಾಹನಗಳನ್ನು ಅಡ್ಡಗಟ್ಟುತ್ತಿದ್ದನ್ನು ಕಂಡ ಬೈಕ್ ಸವಾರ ಪೊಲೀಸರನ್ನು ಕಂಡು ಹಿಂದಕ್ಕೆ ಬೈಕ್ ತಿರುಗಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಎರಡು ಬೈಕ್‍ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ಬೈಕ್‍ಗಳು ಅಪಘಾತಕ್ಕೀಡಾಗಿವೆ. ಇದನ್ನೂ ಓದಿ: ಮದುವೆ ನಂತ್ರ ವಧು, ವರನ ಬೆಂಕಿ ಎಕ್ಸಿಟ್ – ವೀಡಿಯೋ ವೈರಲ್

ಘಟನೆಯಲ್ಲಿ 5 ಮಂದಿಗೆ ಗಾಯಗಳಾಗಿದ್ದು, ಶ್ರೀಕಾಂತ್ ಎಂಬಾತನಿಗೆ ತಲೆಗೆ ಗಂಭೀರ ಗಾಯವಾಗಿದೆ. ಬಾಗೇಪಲ್ಲಿಯ ಬೈರಾರೆಡ್ಡಿಗೆ ಕಾಲು ಮುರಿತವಾಗಿದೆ. ಘಟನೆ ನಂತರ ಪೊಲೀಸರ ನಡೆ ಖಂಡಿಸಿ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು ಕೆಲಕಾಲ ಚಿಂತಾಮಣಿ ಬಾಗೇಪಲ್ಲಿ ಮಾರ್ಗದಲ್ಲಿ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಒಂದಾದ ಡಿಕೆಶಿ-ಎಂಬಿಪಾ

Leave a Reply

Your email address will not be published.

Back to top button