– ಒಂದು ಕೇಕ್ ತಿನ್ನೋಕೆ ಮೋದಿ ಪಾಕಿಸ್ತಾನಕ್ಕೆ ಹೋಗಿದ್ರು
ಬೆಂಗಳೂರು: ನೀಟ್ ಪರೀಕ್ಷೆ (Neet Exam) ಪೇಪರ್ ಲೀಕ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಕೊಡಬೇಕು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆ ಪೇಪರ್ ಲೀಕ್ ಆಗಿರೋದು ಇದೊಂದು ದೊಡ್ಡ ದುರಂತ. ಮಕ್ಕಳು ಕಷ್ಟಪಟ್ಟು ಓದಿರುತ್ತಾರೆ. ಹೀಗೆ ಮಾಡೋದು ಇದೊಂದು ಬುಲ್ಡೋಜರ್ ಸಂಪ್ರದಾಯ. ಎನ್‌ಟಿಎ (NTA) ಪರೀಕ್ಷೆ ಮಾಡಿದಾಗ 6 ಸಾರಿ ಪೇಪರ್ ಲೀಕ್ ಆಗಿದೆ. ಮೋದಿ ಪರೀಕ್ಷಾ ಪೇ ಚರ್ಚಾ ಮಾಡಿದ್ದನ್ನು ಖಂಡನೆ ಮಾಡಬೇಕು. ಈ ಪ್ರಕರಣದ ಜವಾಬ್ದಾರಿ ಮೋದಿ ಅವರು ತಗೋಬೇಕು. ಸಚಿವ ಧರ್ಮೇಂದ್ರ ಪ್ರಧಾನ್ ಸಿಕ್ತಿಲ್ಲ. ಪ್ರಧಾನಿ ಮೋದಿ ಅವರು ಉತ್ತರ ಕೊಡಬೇಕು. ಈ ದೇಶದಲ್ಲಿ ಸರ್ವಾಧಿಕಾರ ಆಡಳಿತ ತಂದಿದ್ದಾರೆ. ಹಣ ಇಲ್ಲ ಅಂತ ಉದ್ಯೋಗ ಖಾತ್ರಿ ಯೋಜನೆ ಗಬ್ಬು ಎಬ್ಬಿಸಿದ್ದಾರೆ. ಮೋದಿ ಅವರು ಬೇರೆ ದೇಶಕ್ಕೆ ಹೋದಾಗ ಚಿನ್ನ ತಗೋಬೇಡಿ ಅಂತ ಹೇಳಿದ್ರಾ? ಈಗ ಮೋದಿ ತಗೋಬೇಡ ಅಂತಾರೆ. ಇವರಿಗೆ ಮಕ್ಕಳು ಉಗಿಯುತ್ತಿದ್ದಾರೆ. ಇನ್ನು ಮುಂದೆಯಾದ್ರೂ ನೀಟ್ ಎಕ್ಸಾಂ ಬಗ್ಗೆ ರಾಜ್ಯ ಸರ್ಕಾರದ ಜೊತೆ ಚರ್ಚೆ ಮಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್‌ನ್ಯೂಸ್| ಎ ಖಾತೆಗೆ ಭರ್ಜರಿ ಡಿಸ್ಕೌಂಟ್ ಆಫರ್ – ಗೈಡೆನ್ಸ್ ವ್ಯಾಲ್ಯೂ ಭಾರೀ ಇಳಿಕೆ
ಮಕ್ಕಳು ದೇಶದ ಭವಿಷ್ಯ. ಪರೀಕ್ಷೆ ಸರಿಯಾಗಿ ಮಾಡಬೇಕು. ನಾನು ಶಿಕ್ಷಣ ಸಚಿವ. ನಾವು ಪರೀಕ್ಷೆ ಮಾಡೋವಾಗ ಪ್ಲ್ಯಾನ್ ಎ, ಬಿ, ಸಿ ಅಂತ ಮಾಡ್ತೀವಿ. ಎನ್‌ಟಿಎಗೆ ಏನ್ ಯೋಗ್ಯತೆ ಇದೆ. ಇವರ ಈ ಕ್ರಮದಿಂದ ಮಕ್ಕಳ ಮೇಲೆ ಒತ್ತಡ ಉಂಟಾಗುತ್ತದೆ. ಏನೇ ಮಾಡಿದ್ರು ಮಕ್ಕಳ ಹಿತದೃಷ್ಟಿಯಿಂದ ತೀರ್ಮಾನ ಮಾಡಬೇಕು. ಎಕ್ಸಾಂಗೆ ಒಂದು ಸಿಸ್ಟಮ್ ಇರುತ್ತದೆ. ಎನ್‌ಟಿಎಯನ್ನ ಕಸದ ಬುಟ್ಟಿಗೆ ಹಾಕಬೇಕು. ಇವರು ಬುಲ್ಡೋಜರ್ ನೀತಿ ಮಾಡ್ತಾ ಇದ್ದಾರೆ. ಈ ಶಿಕ್ಷಣ ಸಚಿವನಿಗೆ ತಲೆ ಇಲ್ಲ ಅಂತ ಬಿಜೆಪಿ ಅವರು ಹೇಳುತ್ತಿದ್ದರು. ಈಗ ನಿಮಗೆ ಮಾನವೀಯತೆ ಇದ್ದರೆ ಕೇಂದ್ರ ಶಿಕ್ಷಣ ಸಚಿವರ ಬಗ್ಗೆ ಹೊರಗೆ ಬಂದು ಮಾತಾಡಿ. ಎಲ್ಲರು ಇದನ್ನು ವಿರೋಧಿಸಬೇಕು. ಎನ್‌ಟಿಎ ಎಕ್ಸಾಂ ಮಾಡಿ 300 ಕೋಟಿ ರೂ. ಲಾಭ ಮಾಡ್ತಾರೆ. ಈ ಪ್ರಕರಣಕ್ಕೆ ಮೋದಿ ಕಾರಣ. ಧರ್ಮೇಂದ್ರ ಪ್ರಧಾನ್ ಸಿಗ್ತಾನೆ ಇಲ್ಲ. ಈ ದೇಶದಲ್ಲಿ ಸರ್ವಾಧಿಕಾರಿ ಸ್ಥಿತಿ ಇದೆ ಎಂದು ಕಿಡಿಕಾರಿದ್ದಾರೆ.
ಒಂದು ಕೇಕ್ ತಿನ್ನೋಕೆ ಮೋದಿ ಪಾಕಿಸ್ತಾನಕ್ಕೆ ಹೋಗಿದ್ರು:
ಕಾಂಗ್ರೆಸ್ ಅವರು ಮಕ್ಕಳ ಪರ ಹೋರಾಟ ಮಾಡಿದ್ರೆ ಬಿಜೆಪಿ ಅವರು ಪಾಕಿಸ್ತಾನ ತೋರಿಸುತ್ತಾರೆ. ಈಗ ಯಾವ ದೇಶ ತೋರಿಸ್ತಾರೆ. ನಾಚಿಕೆ ಆಗೋದಿಲ್ಲವಾ? ಮೋದಿ ಅವರ ಮಿತ ಬಳಕೆ ಹೇಳಿಕೆ ನಾವು ಖಂಡಿಸುತ್ತೇವೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಕ್ಕಳಿಗಾಗಿ ಬಂಗಾರ ಖರೀದಿ ಮಾಡೋದು ಇರುತ್ತದೆ. ಕದ್ದು ತಂದಿರಲ್ಲ. ಕಷ್ಟಪಟ್ಟು ದುಡಿದು ಮಕ್ಕಳ ಭವಿಷ್ಯಕ್ಕೆ ಮಾಡಿರುತ್ತಾರೆ. ಒಂದು ಕೇಕ್ ತಿನ್ನೋಕೆ ಪಾಕಿಸ್ತಾನಕ್ಕೆ ಹೋದ್ರು. ಕಾಂಗ್ರೆಸ್ ಮತ್ತು ಬೇರೆ ಅವರನ್ನ ದ್ವೇಷ ಮಾಡೋಕೆ ಪಾಕಿಸ್ತಾನ ಯೂಸ್ ಮಾಡ್ತಾರೆ. ನೀವು ಯಾಕೆ ಅಲ್ಲಿಗೆ ಹೋಗಿ ಬಂದ್ರಿ? ಈ ಸ್ಥಿತಿ ತರೋಕೆ ಕೇಂದ್ರ ಸರ್ಕಾರ, ಮೋದಿ ಕಾರಣ. ಎಲ್ಲರಿಗೂ ಭಾವನಾತ್ಮಕ ಮಾತು ಹೇಳಿ ಹೇಳಿ ಟಿವಿಯಲ್ಲಿ ಪುಕ್ಸಟ್ಟೆ ಮಾತಾಡಿ ದೇಶ ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೋದಿ ಅವರ ಮಿತಬಳಕೆ ಹೇಳಿಕೆಗೆ ಖಂಡನೆ:
ಪ್ರಧಾನಿ ಮೋದಿ ಅವರ ಮಿತ ಬಳಕೆ ಹೇಳಿಕೆಯನ್ನ ಖಂಡಿಸುತ್ತೇನೆ. ಮಿತ ಬಳಕೆ ಮಾಡುವ ಸ್ಥಿತಿಗೆ ತಂದಿರೋ ಮೋದಿ ಅವರು ರಾಜ್ಯದ ಜನತೆಗೆ ಏನ್ ಉತ್ತರ ಕೊಡ್ತಾರೆ? ನರೇಗಾ ರದ್ದು ಮಾಡಿದ್ದಾರೆ. ಅದಕ್ಕೆ ಕಾರಣ ಅವರ ಬಳಿ ದುಡ್ಡು ಇಲ್ಲ. ರಫೇಲ್ ಜೆಟ್ ಖರೀದಿಗೆ ಹಣ ಇರುತ್ತದೆ. ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಇವರಿಗೆ ದುಡ್ಡು ಇರುತ್ತದೆ. ಜೈ ಶಂಕರ್ ಬೇರೆ ಬೇರೆ ದೇಶಕ್ಕೆ ಹೋಗಿ ಪುಕ್ಸಟ್ಟೆ ಭಾಷಣ ಮಾಡಿದ್ದಾರೆ. ಈ ನೀತಿ ತಂದು ನಮ್ಮನ್ನ ಸಿಕ್ಕಿಸಿದ್ದೀರಾ. ಈ ಜವಾಬ್ದಾರಿ ನೀವು ತಗೋಬೇಕು ಎಂದಿದ್ದಾರೆ.ಇದನ್ನೂ ಓದಿ: ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದ ಸೋನಿಯಾ ಗಾಂಧಿ ಮನೆಗೆ ವಾಪಸ್

