– ನೀಟ್ ಬಳಿಕ ಜೆನ್-ಝಿಗಳ ಜೊತೆ ಮೋದಿ ಸಂವಾದ
– ದೇಶದ ಆರ್ಥಿಕತೆ, ಉದ್ಯೋಗದ ಬಗ್ಗೆ ಪ್ರಸ್ತಾಪ
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ದೇಶದಲ್ಲಿ ಜೆನ್-ಝೀಗಳ ಆಕ್ರೋಶ ಹೆಚ್ಚಾಗಿ, ಸಂಸತ್ ಭವನಕ್ಕೂ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ಬೆನ್ನಲ್ಲೇ ಮಧ್ಯರಾತ್ರಿ ಸರಣಿ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಜೆನ್-ಝೀಗಳ ಜೊತೆ ಸಂವಾದ ನಡೆಸಿದರು.
13 ವರ್ಷಗಳ ಬಳಿಕ ದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‌ಗೆ ಭೇಟಿ ನೀಡಿ, ಶತಮಾನೋತ್ಸವಲ್ಲಿ ಭಾಗಿಯಾದರು. ಈ ವೇಳೆ, 2013ರಲ್ಲಿ ತಾವೂ ಮಾತಾಡಿದ್ದ ಮಾತುಗಳನ್ನು ಸ್ಮರಿಸಿದರು. 2013ರಲ್ಲಿ ಹಣದುಬ್ಬರ ಶೇ.10ರಷ್ಟಿದ್ದು, ಹೆಡ್‌ಲೈನ್ ಆಗಿತ್ತು. ಗಡಿಯಲ್ಲಿ ಸೈನಿಕರು ಪ್ರಾಣಕಳೆದುಕೊಳ್ಳುತ್ತಿದ್ದರು. ಆದರೆ, ಇವತ್ತು ಅಂಥಹ ಸ್ಥಿತಿ ಇಲ್ಲ. ಪಾಕಿಸ್ತಾನಕ್ಕೆ ನುಗ್ಗಿ ನಮ್ಮ ಸೇನೆ ಬೇಟೆಯಾಡುತ್ತಿದೆ. ಜಮ್ಮು-ಕಾಶ್ಮೀರದಿಂದ ಈಶಾನ್ಯ ರಾಜ್ಯಗಳವರೆಗೆ ಶಾಂತಿ ಇದೆ. ನಕ್ಸಲವಾದ ನಿರ್ಮೂಲನೆ ಆಗಿದೆ. ದೇಶದ ಆರ್ಥಿಕತೆ-ಪಾಲಿಸಿಗಳ ಮೇಲೆ ನಿರಾಸಕ್ತರಾಗಿದ್ದವು. ಆದರೀಗ, ಇಡೀ ವಿಶ್ವವು ಭಾರತದ ಆರ್ಥಿಕತೆ ಬಗ್ಗೆ ಮಾತನಾಡುತ್ತಿದೆ. ತ್ರೈಮಾಸಿಕದಲ್ಲಿ ಭಾರತದ ಶೇ.7.8ರಷ್ಟು ಆರ್ಥಿಕತೆ ಬೆಳವಣಿಗೆ ಕಂಡಿದೆ. ಯುದ್ಧ, ವ್ಯಾಪಾರ ಅಡಚಣೆಯಂಥ ಸನ್ನಿವೇಶಗಳಲ್ಲಿ ಶೇ.7.8ರಷ್ಟು ಬೆಳವಣಿಗೆ ಸಾಧಿಸಿರೋದು ಭಾರತದ ಸಾಮರ್ಥ್ಯ ತೋರುತ್ತದೆ. ಅಭಿವೃದ್ಧಿಯ ಜೊತೆಗೆ ಉದ್ಯೋಗವನ್ನೂ ಸೃಷ್ಟಿ ಮಾಡ್ತಿದೆ ಎಂದರು.
ಈ ಹಿಂದೆ ಇದ್ದವರ ಯೋಚನೆ `ಅರ್ಧಲೋಟ’ದಂತಿತ್ತು. ಈಗಲೂ ಅದೇ ರೀತಿ ಇದೆ. ಹಳ್ಳಿಗಳು, ವಿದ್ಯಾರ್ಥಿಗಳಿಗೆ ಜನಧನ ಖಾತೆ ಅನುಕೂಲವಾಗಿದೆ. ಆದರೆ, ಈಗಲೂ ಅದನ್ನು ಟೀಕಿಸುತ್ತಾರೆ. `ನನ್ನಪ್ಪನದು’ ಎಂಬ ಸಂಸ್ಕೃತಿಯನ್ನೇ ಮುಂದುವರಿಸಿದ್ದಾರೆ. ಆದರೆ, ಇದು ನಡೆಯಲ್ಲ. ಸತ್ಯದ ದನಿಮುಂದೆ, ಸುಳ್ಳಿದನಿ ಮುಚ್ಚಿ ಹೋಗುತ್ತೆ ಅಂತ ಕಾಂಗ್ರೆಸ್, ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
