ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‌ನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಇಂದು (ಸೆ.5) ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಮೆಟ್ರೋದಲ್ಲಿ ಮಕ್ಕಳು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.
ಮೆಟ್ರೋ ಕಾರ್ಡ್ ಬಳಸಿ ಮೆಟ್ರೋದಲ್ಲಿ ಸಂಚರಿಸಿದ ಅವರು, ಮಕ್ಕಳು, ಮಹಿಳಾ ಪ್ರಯಾಣಿಕರ ಜೊತೆ ಮಾತುಕತೆ ನಡೆಸಿದರು. ಬಳಿಕ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‌ನ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾದರು. ಇದನ್ನೂ ಓದಿ: ನವಲಿ ಸಮಾನಾಂತರ ಜಲಾಶಯ, ಟಿಬಿ ಡ್ಯಾಂ ಹೂಳು ತೆಗೆಯುವ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚೆ – BYV
#WATCH | Delhi: Prime Minister Narendra Modi traveled by the Delhi Metro today as he headed to Shri Ram College of Commerce (SRCC) to participate in the college’s centenary celebrations.
(Source: DD) pic.twitter.com/AVqtS38z6P
— ANI (@ANI) September 5, 2026
ಈ ಮಧ್ಯೆ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕರ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಮಕ್ಕಳು ಅವಕಾಶವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಲು “ಪಠ್ಯಪುಸ್ತಕಗಳನ್ನೂ ಮೀರಿ ಅವರೊಂದಿಗೆ ಬೆರೆಯಿರಿ ಅಂತ ಸಲಹೆ ನೀಡಿದ್ದಾರೆ. ಇದೇ ವೇಳೆ, ಸಾರ್ವಜನಿಕವಾಗಿ ಧೈರ್ಯವಾಗಿ ಮಾತಾಡಲು ಟಿಪ್ಸ್ ಕೊಡಿ ಅಂತ ಕೇಳಿದರು. ಇದಕ್ಕೆ ಕೆಲ ಶಿಕ್ಷಕರು ಉತ್ತರಿಸಿ ಅದಕ್ಕೆ `ಆತ್ಮವಿಶ್ವಾಸ’ ಬೆಳೆಸಿಕೊಳ್ಳಬೇಕು ಅಂದಿದ್ದಾರೆ.

