ನವದೆಹಲಿ: ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಎಲ್ಐಸಿಎಚ್ಎಫ್ಎಲ್) ನಿಂದ ಸುಮಾರು 980 ಕೋಟಿ ರೂ. ಸಾಲ ಪಡೆದಿರುವ ಆರೋಪದ ಮೇಲೆ ಎಸ್ಸೆಲ್ ಗ್ರೂಪ್ನ ಮಾಜಿ ಅಧ್ಯಕ್ಷ ಸುಭಾಷ್ ಚಂದ್ರ (Subhash Chandra) ಸೇರಿದಂತೆ ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಪ್ರಕರಣ ದಾಖಲಿಸಿದೆ.
ಸಿಬಿಐನ ಎಫ್ಐಆರ್ನಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ, ನಂಬಿಕೆ ದ್ರೋಹ ಮತ್ತು ತಪ್ಪು ಲಾಭ ಗಳಿಸಿದ ಆರೋಪಗಳಿವೆ. ಎಲ್ಐಸಿಹೆಚ್ಎಫ್ಎಲ್ ಸಿಬಿಐ ಪ್ರಧಾನ ಕಚೇರಿಯಲ್ಲಿ ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಬಂಗಾಳದ ಶಾಲೆಗಳಲ್ಲಿ ಸೊಳ್ಳೆ ಕಾಟ – ಹೆಣ್ಮಕ್ಕಳು ಸ್ಕರ್ಟ್ ಬದಲು ಸಲ್ವಾರ್ ಹಾಕೊಂಡು ಬರುವಂತೆ ಆರೋಗ್ಯ ಸಚಿವರ ಸಲಹೆ
ದೂರಿನ ಪ್ರಕಾರ, ಎರಡು ಪ್ರತ್ಯೇಕ ಸಾಲಗಳಿಗೆ ಗ್ಯಾರಂಟರ್ ಆಗಿ ಸೇವೆ ಸಲ್ಲಿಸಿದಾಗ ಸುಭಾಷ್ ಚಂದ್ರ ಸಲ್ಲಿಸಿದ ನಿವ್ವಳ ಮೌಲ್ಯ ಪ್ರಮಾಣಪತ್ರಗಳು ಅವರ ಆಸ್ತಿಗಳು ಸಾವಿರಾರು ಕೋಟಿ ರೂಪಾಯಿಗಳಷ್ಟಿವೆ ಎಂದು ತೋರಿಸಿವೆ. ಚಂದ್ರ ಅವರು ಸ್ವತಃ ಈ ಅಂಕಿಅಂಶಗಳನ್ನು ಪ್ರಶ್ನಿಸಿದ್ದಾರೆ. ಅವರ ನಿಜವಾದ ನಿವ್ವಳ ಮೌಲ್ಯ ಅಷ್ಟು ಹೆಚ್ಚಿಲ್ಲ ಎಂದಿದ್ದಾರೆ.
