ಸತೀಶ್ ನೀನಾಸಂ, ಶ್ರುತಿ ಹರಿಹರನ್ ಅಭಿನಯಿಸಿದ್ದ `ಲೂಸಿಯಾ’ (Lucia) ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಶುರುಮಾಡಿತ್ತು. ಕ್ರೌಡ್ ಫಂಡಿಂಗ್ನಲ್ಲಿ ಕಡಿಮೆ ಬಜೆಟ್ನಲ್ಲಿ ಪವನ್ ಕುಮಾರ್ ಸೊಗಸಾದ ಚಿತ್ರ ತಯಾರಿಸಿದ್ದರು. ಅದ್ರಂತೆ ಭರ್ಜರಿ ಹಿಟ್ ಆಗಿತ್ತು. ಅದರ ಸಂಗೀತ ಈಗಲೂ ಎವರ್ಗ್ರೀನ್. ಇದೀಗ ಚಿತ್ರಕ್ಕೆ 13 ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ನಿರ್ದೇಶಕ ಪವನ್ ಕುಮಾರ್ `ಲೂಸಿಯಾ 2′ ಮಾಡುವ ಸುಳಿವು ನೀಡಿದ್ದಾರೆ.
ಹಲವು ಸರಣಿ ಚಿತ್ರಗಳು ಬಂದಿದ್ದರೂ ಅದೆಲ್ಲವೂ ಹಿಟ್ ಆಗಿಲ್ಲ. ಆದರೂ ಜನರ ಬೇಡಿಕೆಗಳು ನಿಲ್ಲುತ್ತಿಲ್ಲ. ಇದೀಗ ಪವನ್ ಕುಮಾರ್ ಲೂಸಿಯಾ 2 ಮಾಡುವ ಕುರಿತು ಚಿಂತಿಸುತ್ತಿರೋದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾನ್ಯ ಅಯ್ಯರ್ ನಟನೆಯ `ವಿಷ್ಣುವಲ್ಲಭ’ ಚಿತ್ರಕ್ಕೆ ಮುಹೂರ್ತ

2013ರ ಸಪ್ಟೆಂಬರ್ 6 ರಂದು ಲೂಸಿಯಾ ಚಿತ್ರ ತೆರೆಕಂಡಿತ್ತು. ಈ ಮೂಲಕ ಪವನ್ ಕುಮಾರ್ ವಿಭಿನ್ನ ಪಂಕ್ತಿ ನಿರ್ದೇಶಕರ ಸಾಲಿನಲ್ಲಿ ನಿಂತು ಗುರುತಿಸಿಕೊಂಡ್ರು. ಇತ್ತೀಚೆಗೆ ಪವನ್ ಸಿನಿಮಾ ನಿರ್ದೇಶನದಿಂದ ಅಂತರ ಕಾಯ್ದುಕೊಂಡಿದ್ದು, ಮಲಯಾಳಂನ ಧೂಮಂ ಚಿತ್ರವೇ ಕೊನೆ. ಆದರೆ ಇದೀಗ ಲೂಸಿಯಾ ಆನಿವರ್ಸರಿ ಸಂದರ್ಭದಲ್ಲಿ ಹಲವು ಬಾರಿ ಲೂಸಿಯಾ 2 ಬೇಡಿಕೆ ಬಂದಿದ್ದರೂ ನಾನು ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೀಗ ಅನ್ನಿಸುತ್ತಿದೆ ಯಾಕೆ ಲೂಸಿಯಾ ಸೀಕ್ವೆಲ್ ಮಾಡಬಾರದು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.
