– ಮಗಳ ವಿಚಾರದಲ್ಲಿ ತಪ್ಪು ಮಾಡಿದ್ದೇನೆ ಹೊರತು ಪರೀಕ್ಷೆಯಲ್ಲಿ ಅಲ್ಲ ಎಂದ ಮಾಜಿ ಅಧ್ಯಕ್ಷ
ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣ (KPSC Scam) ಕೇಸ್ನಲ್ಲಿ ಸಿಐಡಿ ವಿಚಾರಣೆ ಎದುರಿಸುತ್ತಿರುವ ಶಿವಶಂಕರಪ್ಪ ಸಾಹುಕಾರ್ (Shivashankarappa Sahukar) ಹಗರಣ ಒಪ್ಪಿಕೊಳ್ಳುವುದಕ್ಕೆ ನಕಾರ ವ್ಯಕ್ತಪಡಿಸಿದ್ದಾರೆ.
ಸಿಐಡಿ ವಿಚಾರಣೆ ಸಂದರ್ಭದಲ್ಲಿ, ನಾನು ಮಗಳ ವಿಚಾರದಲ್ಲಿ ತಪ್ಪು ಮಾಡಿದ್ದೇನೆಯೇ ಹೊರತು ಪರೀಕ್ಷೆಯಲ್ಲಿ ಅಲ್ಲ. ಮಗಳ ವಿಚಾರದಲ್ಲಿ ತಾಂತ್ರಿಕ ತಪ್ಪುಗಳಾಗಿರಬಹುದು. ಅದನ್ನು ಹೊರತುಪಡಿಸಿ ಯಾರೊಂದಿಗೂ ನಾನು ವ್ಯವಹಾರ ಮಾಡಿಲ್ಲ ಎಂದು ಶಿವಶಂಕರಪ್ಪ ಹೇಳಿದ್ದಾರೆನ್ನಲಾಗಿದೆ. ಇದನ್ನೂ ಓದಿ: KPSC Scam | ದುಡ್ಡು ಕೊಟ್ಟ ದಡ್ಡ ಶಿಖಾಮಣಿಗಳಿಗೆ ದೇವನಹಳ್ಳಿ ಬಳಿಯ ರೆಸಾರ್ಟ್ನಲ್ಲಿ ಟ್ರೈನಿಂಗ್
ಗ್ಯಾನೇಂದ್ರ ಜೊತೆ ನನ್ನದು ಬರೀ ಆಡಳಿತ ವ್ಯವಹಾರ. ಅದನ್ನು ಬಿಟ್ಟು ಹಣಕಾಸಿನ ಮಾತುಕತೆಯಾಗಲಿ, ಪರೀಕ್ಷೆ ವಿಚಾರ ಆಗಲಿ ಮಾತನಾಡಿಲ್ಲ. ಬಸವರಾಜ್ ಕನ್ನಾಳೆಯನ್ನು ನಾನು ಮುಖಾಮುಖಿ ಭೇಟಿಯೂ ಆಗಿಲ್ಲ. ನಾನು ಈ ಅವ್ಯವಹಾರದಲ್ಲಿ ಪರೋಕ್ಷವಾಗಿಯೂ ಕೈ ಹಾಕಿಲ್ಲ ಎಂದು ಸಿಐಡಿ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೇ ಸಾಕಷ್ಟು ವಿಚಾರದಲ್ಲಿ ನೋವು ಪಟ್ಟಿದ್ದೇನೆ ಎಂದು ಸಿಐಡಿ ಮುಂದೆ ಶಿವಶಂಕರಪ್ಪ ಗೋಳಾಡಿದ್ದಾರೆ. ಇದನ್ನೂ ಓದಿ: KIADBಯಲ್ಲಿ ಒಬ್ಬನೇ ವ್ಯಕ್ತಿಗೆ SC/ST ಕೋಟಾದಡಿ 250 ಕೋಟಿಯ 15-17 ಎಕರೆ ಭೂಮಿ ಹಂಚಿಕೆ – ಛಲವಾದಿ ಆರೋಪ
