ಬೆಂಗಳೂರು: ಕೆಪಿಎಸ್‌ಸಿಯಲ್ಲಿ (KPSC) ಅಕ್ರಮ ತಾಂಡವವಾಡುತ್ತಿರುವ ಹೊತ್ತಲ್ಲೇ ಛಲವಾದಿ ನಾರಾಯಣಸ್ವಾಮಿ ಮತ್ತೊಂದು ದಾಖಲೆ ಸಾಕ್ಷ್ಯ ಬಿಟ್ಟಿದ್ದಾರೆ. ಕೆಐಎಡಿಬಿಯಲ್ಲಿ (KIADB) ಒಂದೇ ವ್ಯಕ್ತಿಗೆ ಎಸ್‌ಸಿ/ಎಸ್‌ಟಿ ಕೋಟಾದಲ್ಲಿ ಬರೋಬ್ಬರಿ 250 ಕೋಟಿ ರೂ. ಮೌಲ್ಯದ 15 ರಿಂದ 17 ಎಕರೆ ಜಮೀನು ಹಂಚಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಂಜುನಾಥ್ ಎಂಬ ವ್ಯಕ್ತಿಗೆ ಎಸ್‌ಸಿ/ಎಸ್‌ಟಿ ಕೋಟಾದಲ್ಲಿ 75% ರಿಬೇಟ್ ಪಡೆದು 10 ಕಡೆ ಸುಮಾರು 15-17 ಎಕರೆ ಜಮೀನು ಹಂಚಿಕೆ ಮಾಡಲಾಗಿದೆ. ದೇವನಹಳ್ಳಿಯ ಏರೋಸ್ಪೇಸ್ ಜಾಗದಲ್ಲೇ ಹಂಚಿಕೆ ಆಗಿದ್ದು, ಇದರಲ್ಲಿ ದೊಡ್ಡ ಅಕ್ರಮ ಆಗಿದೆ. ಇದು ಹೇಗೆ ಸಾಧ್ಯ ಅಂತ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್‌ಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಶುದ್ಧೀಕರಣ ವಿವಾದ – ಉತ್ತರಾಖಂಡ ಬಿಜೆಪಿ ಸದಸ್ಯರ ಮೇಲೆ ಎಸ್‌ಸಿ/ ಎಸ್‌ಟಿ ಕಾಯ್ದೆಯ ಅಡಿ ಬೆಂಗಳೂರಿನಲ್ಲಿ ಎಫ್‌ಐಆರ್
ಮೊದಲು 2 ಎಕರೆ ಜಮೀನು ಪಡೆಯುತ್ತಾನೆ, ಬಳಿಕ ತಾಯಿ, ಹೆಂಡತಿ, ಹೆಂಡತಿಯ ತಾಯಿ, ಬೇರೆ ಕಂಪನಿಗೆ ಹಂಚಿಕೆ ಆಗಿದ್ದ ಜಮೀನು ಮತ್ತು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕುಟುಂಬದ ಸಿದ್ದಾರ್ಥ ಟ್ರಸ್ಟ್‌ಗೆ ಹಂಚಿಕೆ ಆಗಿ ವಾಪಸ್ ಪಡೆದಿದ್ದ 5 ಎಕರೆ ಜಮೀನಿನಲ್ಲೂ ಮಂಜುನಾಥ್ ಅನ್ನೋನಿಗೆ ಜಮೀನು ಹಂಚಿಕೆ ಆಗಿದೆ ಅಂತ ಆರೋಪ ಮಾಡಿದ್ದಾರೆ.
ಎರಡನೇ ಕೇಸ್‌ನಲ್ಲಿ ಬಾಗಮನೆ ಎಸ್ಟೇಟ್ ಡೆವಲಪರ್ಸ್ ಕಂಪನಿ ಹತ್ತಿರ ಸಚಿವ ಎಂ.ಬಿ ಪಾಟೀಲ್ (MB Patil) 4 ಕೋಟಿ ರೂ. ಸಾಲ ಪಡೆದಿದ್ದಾರೆ ಅಂತ ಚುನಾವಣೆ ಆಯೋಗದ ಅಫಿಡವಿಟ್‌ನಲ್ಲಿ ತೋರಿಸಿದ್ದಾರೆ. ಅಲ್ಲಿಗೆ ಇವರಿಗೂ ಅವರಿಗೂ ಸಂಬಂಧ ಇದೆ ಅಂತ ಆಯ್ತು. ಇಲ್ಲಿ ಹಣಕಾಸು ವ್ಯವಹಾರ ಆಗಿದೆ ಅಂತ ಎಂ.ಬಿ ಪಾಟೀಲ್ ಮೇಲೆ ಛಲವಾದಿ ನಾರಾಯಣಸ್ವಾಮಿ ಆರೋಪ ಮಾಡಿದ್ರು. 15 ದಿನ ಆದ ಮೇಲೆ ಮತ್ತೊಮ್ಮೆ ದಾಖಲೆ ಬಿಡುಗಡೆ ಮಾಡ್ತೀನಿ. ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ. ಇಲ್ಲವಾದ್ರೆ ಕೋರ್ಟಿಗೂ ಕೇಸ್ ಹಾಕ್ತೀನಿ ಅಂತ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: NSUI ಹಾಸನ ಜಿಲ್ಲಾಧ್ಯಕ್ಷ ನೇಣು ಬಿಗಿದುಕೊಂಡು ಆತ್ಮಹತ್ಯೆ
