ಹಾವೇರಿ: ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಕ್ಯಾಂಟೀನ್‌ನಲ್ಲಿ (Haveri) ರೋಗಿಯ ಸಂಬಂಧಿಕರೊಬ್ಬರು ಉಪಹಾರಕ್ಕೆಂದು ಆರ್ಡರ್ ಮಾಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆಯಾಗಿದೆ.
ರೋಗಿಗಳು, ಸಂಬಂಧಿಕರು ಕ್ಯಾಂಟೀನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ರಾಘವೇಂದ್ರ ಕ್ಯಾಂಟೀನ್‌ನಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಣಂತಿಗೆ ಆಕೆಯ ಸಂಬಧಿಕರು ಕೇಸರಿಬಾತ್- ಉಪ್ಪಿಟ್ಟು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆಯಾಗಿದೆ.
ಈ ಕುರಿತು ಕ್ಯಾಂಟೀನ್ ಮಾಲೀಕ ಚಂದ್ರು ಪ್ರತಿಕ್ರಿಯಿಸಿ, ಬೆಳಗ್ಗೆ ಕ್ಯಾಂಟೀನ್ ಓಪನ್ ಮಾಡಿ ಮನೆಗೆ ಹೋಗಿದ್ದೆ. ಕೇಸರಿಬಾತ್‌ನಲ್ಲಿ ಹಲ್ಲಿ ಬಿದ್ದಿದೆ ಅಂತಾ ಗ್ರಾಹಕರು ಬಂದಿದ್ದರು. ಹೇಗೆ ಹಲ್ಲಿ ಬಂದಿದೆ ಅನ್ನೋದು ಗೊತ್ತಾಗಿಲ್ಲ. ಇನ್ನು ಮುಂದೆ ಸರಿಯಾಗಿ ಕ್ಲೀನ್ ಮಾಡುತ್ತೇವೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ಹಾನಿ ಉಂಟುಮಾಡುವ ಪ್ರತಿಯೊಂದು ಸಂಚಿನಲ್ಲೂ ಕಾಂಗ್ರೆಸ್, ವಿಪಕ್ಷಗಳು ಭಾಗಿ: ಸಿಎಂ ಯೋಗಿ ಸಿಡಿಮಿಡಿ
ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಯಾಂಟೀನ್ ಮಾಲೀಕ ವಿರುದ್ಧ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ | ನಾಳೆ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು, ದರ್ಶನ್‌ಗೆ ಸಂಕಷ್ಟ!

