ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ತಾಂಡವ್ ರಾಮ್ ಅವರನ್ನು ಎಮರ್ಜೆನ್ಸಿ ಎಕ್ಸಿಟ್ ಮಾಡಿ ಸ್ಪರ್ಧಿಗಳು ಮತ್ತು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದ್ದ ಬಿಗ್ ಬಾಸ್ ಈಗ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ದೊಡ್ಮನೆಯಲ್ಲಿ ತಾಂಡವ್ ಅವರ ಜರ್ನಿಯೇ ಮುಗಿದಿಲ್ಲವಂತೆ. ಅವರನ್ನು ಮತ್ತೆ ಬಿಗ್ ಬಾಸ್ ಮನೆಯೊಳಗೆ ಕಳುಹಿಸುವ ಸುಳುವು ನೀಡಲಾಗಿದೆ.
ಹೌದು, ವಾರದ ಕತೆ-ಕಿಚ್ಚನ ಜೊತೆ ಪ್ರೋಮೊದಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ವೇದಿಕೆಗೆ ತಾಂಡವ್ ರಾಮ್‌ರನ್ನು ಕಿಚ್ಚು ಸುದೀಪ್ ಅವರು ಬರಮಾಡಿಕೊಳ್ತಾರೆ. ನಗು ಮೊಗದಲ್ಲೇ ತಾಂಡವ್ ಬಂದು ಕಿಚ್ಚನನ್ನು ಅಪ್ಪಿಕೊಳ್ತಾರೆ.
ತಾಂಡವ್ re-entry?
ಬಿಗ್ ಬಾಸ್ – ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 8:00
ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq#BBK13 #ColorsKannada #ಕಲರ್‌ಫುಲ್‌ಕತೆ #colorfulstory #KichchaSudeepa #CKPromo pic.twitter.com/DWnbVcS7r9
— Colors Kannada (@ColorsKannada) September 26, 2026
ತಾಂಡವ್‌ರನ್ನು ಮಾತನಾಡಿಸಿ ಕಿಚ್ಚ ಸುದೀಪ್, ಅಷ್ಟು ಕಾನ್ಫಿಡೆಂಟ್ ಆಗಿ ಒಳಗೆ ಹೋದ್ರಲ್ಲ ಏನಾಯ್ತು ಯಡವಟ್ಟು? ಹೋದ ವಾರ ಬಂದಾಗ ಏನು ಆಗಬಾರದು ಅಂತ ಹೇಳಿದ್ದೆ ಅಂತ ಕೇಳ್ತಾರೆ. ಅದಕ್ಕೆ ತಾಂಡವ್, ಕೋ-ವಿಐಪಿ ಆಗಬಾರದು ಅಂತ ಹೇಳಿದ್ದಿರಿ ಎಂದು ಪ್ರತಿಕ್ರಿಯಿಸುತ್ತಾರೆ. ಆಗ ತಾಂಡವ್ ಕಿವಿ ಹಿಂಡಿದ ಕಿಚ್ಚ, ಏನಪ್ಪ.. ಏನ್ ಮಾಡ್ಬಾರ್ದು ಅಂತ ಹೇಳಿದ್ದೆ ಎಂದು ಪುನಃ ಕೇಳ್ತಾರೆ.
ಬಳಿಕ ತಾಂಡವ್ ಜರ್ನಿ ವಿಟಿಯನ್ನು ಸುದೀಪ್ ಪ್ಲೇ ಮಾಡಿಸುತ್ತಾರೆ. ಆದರೆ, ಸ್ವಲ್ಪದರಲ್ಲೇ ವಿಟಿ ನಿಂತು ಹೋಗುತ್ತೆ. ಈ ದೃಶ್ಯ ನೋಡುಗರನ್ನು ಅಚ್ಚರಿಗೆ ದೂಡುತ್ತದೆ. ಏನಾಯ್ತು ರೀ.. ಬಿಗ್ ಬಾಸ್ ಅಂತ ಸುದೀಪ್ ಕೇಳ್ತಾರೆ. ಆಗ ತಾಂಡವ್, ದಯವಿಟ್ಟು ವಿಟಿ ಹಾಕಿ ಅಂತ ಕೇಳ್ತಾರೆ. ಕಿಚ್ಚ ಮಾತನಾಡಿ, ಇದರರ್ಥ.. ನಿಮ್ಮ ಜರ್ನಿ ಇನ್ನೂ ಕಂಪ್ಲೀಟ್ ಆಗಿಲ್ಲ ಅಂತ ಹೇಳ್ತಾರೆ. ಈ ಮಾತು ವೀಕ್ಷಕರಿಗೆ ಮತ್ತೆ ಶಾಕ್ ಕೊಟ್ಟಂತಿದೆ. ಹಾಗಾದ್ರೆ, ತಾಂಡವ್ ರಾಮ್ ಮತ್ತೆ ದೊಡ್ಮನೆಗೆ ರೀ-ಎಂಟ್ರಿ ಕೊಡ್ತಾರಾ? ಮುಂದೇನಾಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

