ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ಪ್ಲಾಸ್ಟಿಕ್ ಹಾವಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ತ್ಯಾಜ್ಯ ವಿಲೇವಾರಿಯಲ್ಲಿ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಎಡವಟ್ಟು ಮಾಡಿದೆ.
ಕಾಡಂಚಿನಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ತಾಜ್ಯ (Plastic Waste) ಬಿದ್ದಿದ್ದು, ಕಾಡು ಪ್ರಾಣಿಗಳ ಜೀವಕ್ಕೆ ಸಂಚಕಾರ ಕುರಿತು ‘ಪಬ್ಲಿಕ್ ಟಿವಿ’ ವರದಿ ಮಾಡಿತ್ತು. ತಕ್ಷಣ ಎಚ್ಚೆತ್ತ ಪ್ರಾಧಿಕಾರ ತರಾತುರಿಯಲ್ಲಿ ಕಸ ವಿಲೇವಾರಿ ಮಾಡಿದೆ. ಆದರೆ, ತಾಜ್ಯ ವಿಲೇವಾರಿ ಮಾಡುವ ಭರದಲ್ಲಿ ಪ್ರಾಧಿಕಾರ ಎಡವಟ್ಟು ಮಾಡಿದ್ದು, ಅವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಲಾಗಿದೆ. ಇದನ್ನೂ ಓದಿ: ಪರಿಷತ್ ಚುನಾವಣೆ; ಬಿಡದಿಯ ವಂಡರ್ ಲಾ ರೆಸಾರ್ಟ್‌ನಲ್ಲಿ ಇಂದು ಸಿಎಲ್‌ಪಿ ಸಭೆ
ಹಳ್ಳ ತೆಗೆದು ಪ್ಲಾಸ್ಟಿಕ್ ತ್ಯಾಜ್ಯವನ್ನು ಹೂತು ಮೇಲೆ ಮಣ್ಣು ಸುರಿಯಲಾಗಿದೆ. ಮತ್ತಷ್ಟು ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಸುಟ್ಟು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಜೆಸಿಬಿ ಮೂಲಕ ಮಣ್ಞು ಹಾಕಿ ಭೂಮಾಲಿನ್ಯಕ್ಕೆ ಎಡೆಮಾಡಿಕೊಟ್ಟಿದೆ.
ತ್ಯಾಜ್ಯ ವಸ್ತುಗಳನ್ನು ರೀಸೈಕ್ಲಿಂಗ್ ಮಾಡದೇ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿದೆ. ಕಾಡಂಚಿನಲ್ಲಿ ಭೂಮಾಲಿನ್ಯ ಮಾಡಿ ಅವಾಂತರ ಸೃಷ್ಟಿಸಿದೆ. ಇದನ್ನೂ ಓದಿ: ದೇಹವನ್ನ ಕತ್ತರಿಸಿ ರಣಹದ್ದುಗಳಿಗೆ ಬಿಸಾಡುವುದೇ ಪವಿತ್ರ ಅಂತ್ಯಕ್ರಿಯೆ – ಎಲ್ಲಿ ಈ ವಿಚಿತ್ರ ಸಂಸ್ಕೃತಿ?
