– ಅಗ್ನಿಶಾಮಕ ವಾಹನದ ಜಖಂ, ಮೂವರಿಗೆ ಗಾಯ
ಲಕ್ನೋ: ಗ್ರೇಟರ್ ನೋಯ್ಡಾದ (Greater Noida) ಎಲೆಕ್ಟ್ರಾನಿಕ್ ಚಿಪ್ ಉತ್ಪಾದನಾ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವಾಗ ಇಬ್ಬರು ಅಗ್ನಿ ಶಾಮಕ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಈ ಅವಘಡದಲ್ಲಿ ಮೂವರು ಗಾಯಗೊಂಡಿದ್ದಾರೆ.
ಸೋಮವಾರ ತಡರಾತ್ರಿ ಇಕೋಟೆಕ್-3 ಕೈಗಾರಿಕಾ ಪ್ರದೇಶದ ಐಎಲ್‌ಜಿಐಎಂ ಕಂಪನಿಯಲ್ಲಿ ಈ ಘಟನೆ ಸಂಭವಿಸಿದೆ. ಮಾಹಿತಿ ತಿಳಿದ ತಕ್ಷಣ ಆರು ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಕಳಿಸಲಾಗಿತ್ತು. ಬೆಂಕಿ ನಂದಿಸುವಾಗ ಕಾರ್ಖಾನೆಯ ಗೋಡೆ ಹಾಗೂ ಬೃಹತ್ ಕಬ್ಬಿಣದ ಕಂಬಿ ಉರುಳಿ ಬಿದ್ದಿದೆ. ಇದರಿಂದ ಐವರು ಸಿಬ್ಬಂದಿ ಗಾಯಗೊಂಡಿದ್ದರು. ಅಲ್ಲದೇ ಅಗ್ನಿಶಾಮಕ ವಾಹನ ಸಹ ಜಖಂ ಆಗಿದೆ.ಇದನ್ನೂ ಓದಿ: ಇಂದೇ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ: ಮದ್ರಾಸ್ ಹೈಕೋರ್ಟ್
ಗಾಯಾಳುಗಳನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅಗ್ನಿಶಾಮಕ ಸಿಬ್ಬಂದಿ ರೋಹಿತ್ ಯಾದವ್ ಮತ್ತು ಹೆಡ್ ಕಾನ್‌ಸ್ಟೆಬಲ್ ಚಾಲಕ ತಿರತ್‌ಪಾಲ್ ಸಾವಿಗೀಡಾದರು.
ಗಾಯಗೊಂಡ ಅಗ್ನಿಶಾಮಕ ದಳದ ಚಾಲಕ ರಾಜ್‌ಪಾಲ್ ಸಿಂಗ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಮನೀಶ್ ಕುಮಾರ್, ಅಮಿತ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ದಿಢೀರ್ 300 ಅಡಿ ಕುಸಿದ ಏರ್ ಇಂಡಿಯಾ ವಿಮಾನ – 12 ಮಂದಿಗೆ ಗಾಯ
