DistrictsKarnatakaLatestUdupi

ರಾಮಜನ್ಮಭೂಮಿ, ಗಂಗಾ ಶುದ್ಧೀಕರಣ ಬಗ್ಗೆ ಪ್ರಧಾನಿ ಮೋದಿ, ಪೇಜಾವರ ಸ್ವಾಮೀಜಿ ಮಾತುಕತೆ

ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿರುವ ಪ್ರಧಾನಿ ಕಚೇರಿಗೆ ತೆರಳಿದ ಸ್ವಾಮೀಜಿಯವರನ್ನು ಪ್ರಧಾನಿ ಮೋದಿ ಗೌರವದಿಂದ ಸ್ವಾಗತಿಸಿದ್ದಾರೆ.

ಸುಮಾರು ಅರ್ಧ ಗಂಟೆಗಳ ಕಾಲ ಇಬ್ಬರ ನಡುವೆ ಮಾತುಕತೆ ನಡೆದಿದೆ. ಐದು ವರ್ಷಗಳ ಆಡಳಿತಕ್ಕೆ ಸ್ವಾಮೀಜಿ ಈ ಸಂದರ್ಭ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ರಾಮ ಜನ್ಮಭೂಮಿ ವಿವಾದ, ಗಂಗಾ ನದಿ ಶುದ್ಧೀಕರಣ ಕುರಿತಾದ ಅಭಿಪ್ರಾಯವನ್ನು ಸ್ವಾಮೀಜಿ ಪ್ರಧಾನಿ ಬಳಿ ವ್ಯಕ್ತಪಡಿಸಿದ್ದಾರೆ. ಮುಂದಿನ ಐದು ವರ್ಷಗಳ ಆಡಳಿತಕ್ಕೆ ಸ್ವಾಮೀಜಿ ಶುಭಕೋರಿದ್ದಾರೆ. ಗುರು ಪೂರ್ಣಿಮೆ ದಿನ ನಿಮ್ಮ ಭೇಟಿಯಾದದ್ದು ನಮ್ಮ ಸುಯೋಗ ಎಂದಿದ್ದಾರೆ.

ಸ್ವಾಮೀಜಿ ಭೇಟಿ ನಂತರ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ವಿಶೇಷ ದಿನದಂದು ಗುರುಗಳ ಭೇಟಿಯಿಂದ ಮನಸ್ಸಿಗೆ ಖುಷಿಯಾಗಿದೆ. ಶ್ರೀಗಳಿಂದ ಸಿಕ್ಕ ಆಶೀರ್ವಾದ ದೊಡ್ಡದು. ಪೇಜಾವರಶ್ರೀಗಳಿಂದ ಕಲಿಯುವಂತದ್ದು ಸಾಕಷ್ಟಿದೆ. ಸ್ವಾಮೀಜಿಗಳ ಮಹತ್ವಾಕಾಂಕ್ಷೆಯ ಕಲ್ಪನೆಗಳನ್ನು ಮೋದಿ ಹೊಗಳಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ನಡೆಸಿದ ಅರ್ಧಗಂಟೆ ಮಾತುಕತೆಯ ಸವಿವರವನ್ನು ರಾಜ್ಯಕ್ಕೆ ಬಂದ ನಂತರ ಕೊಡುವುದಾಗಿ ಸ್ವಾಮೀಜಿ ಹೇಳಿದ್ದಾರೆ.

Leave a Reply

Your email address will not be published.

Back to top button