ರಾಯ್ಪುರ್: ನರ್ಸ್‍ನ್ನು (Nurse) ಅಪ್ರಾಪ್ತೆ ಬಾಲಕ ಸೇರಿದಂತೆ ನಾಲ್ವರು ಸೇರಿ ಚಾಕುವಿನಿಂದ ಹೆದರಿಸಿ ಆಕೆಯನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಛತ್ತಿಸ್‍ಗಢದ (Chhattisgarh) ಮನೇಂದ್ರಗಢ ಚರ್ಮಿರಿ ಭಾರತ್‍ಪುರ (ಎಂಸಿಬಿ) ಜಿಲ್ಲೆಯಲ್ಲಿ ನಡೆದಿದೆ.
ಜಾಗ್ರಖಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಚಿಪ್ಚಿಪ್ ಗ್ರಾಪಂನಲ್ಲಿರುವ ಉಪ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಕಟ್ಟಡದಲ್ಲಿ 32 ವರ್ಷದ ಮಹಿಳೆ (Woman) ಒಬ್ಬಳೇ ಇದ್ದಾಗ ಅಪ್ರಾಪ್ತ ಮತ್ತು ಆತನ ಮೂವರು ಸಹಚರರು ಒಳಗೆ ನುಗ್ಗಿದ್ದಾರೆ. ಈ ವೇಳೆ ಆಕೆಗೆ ಚಾಕುವಿನಿಂದ ಹೆದರಿಸಿದ್ದಾರೆ. ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇದನ್ನೂ ಓದಿ: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ!
Advertisement
Advertisement
ಘಟನೆಗೆ ಸಂಬಂಧಿಸಿ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳದಿಂದ ಪರಾರಿಯಾಗುವ ಮೊದಲು ಆರೋಪಿಗಳು ಕೃತ್ಯವನ್ನು ಚಿತ್ರೀಕರಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 17 ವರ್ಷದ ಆರೋಪಿ ಮತ್ತು ಆತನ ಇಬ್ಬರು ಸಹಚರರನ್ನು ಪೊಲೀಸರು (Police) ಬಂಧಿಸಿದ್ದು (Arrest), ಪ್ರಕರಣದ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಶಬ್ಧಕ್ಕಿಂತಲೂ ಜೋರಾಗಿದೆ ಪಟಾಕಿ ದರ- ಹಬ್ಬದ ಸಂಭ್ರಮದಲ್ಲಿದ್ದವರು ಬೆಲೆ ಕೇಳಿ ಫುಲ್ ಸುಸ್ತು!