ನವದೆಹಲಿ: ಬಾಂಗ್ಲಾದೇಶದಲ್ಲಿ(Bangladesh) 2024 ರ ಜುಲೈ-ಆಗಸ್ಟ್ ಅವಧಿಯಲ್ಲಿ ನಡೆದ ಚಳುವಳಿ ಶಾಂತಿಯುತ ವಿದ್ಯಾರ್ಥಿ ಚಳವಳಿಯಾಗಿರಲಿಲ್ಲ. ಬದಲಿಗೆ ಅದು ಆಡಳಿತ ಬದಲಾವಣೆಗೆಂದೇ ನಡೆಸಿದ ಸಂಘಟಿತ ಹಿಂಸಾತ್ಮಕ ರಾಜಕೀಯ ಅಸ್ತ್ರ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿಯ ‘ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ’ ಆಯೋಜಿಸಿದ್ದ ವರ್ಚುವಲ್ ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾಂಗ್ಲಾದೇಶವು ಸಾಗುತ್ತಿರುವ ಪ್ರಸ್ತುತ ದಾರಿಯ ಕುರಿತು ತೀವ್ರ ಕಳವಳ ಮತ್ತು ನೋವನ್ನು ತೋಡಿಕೊಂಡಿದ್ದಾರೆ.
ತಮಗೆ ಮರಣದಂಡನೆ ವಿಧಿಸಲಾಗಿದ್ದರೂ ಸಹ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಹಿಂತಿರುಗುವುದಾಗಿ ಶೇಖ್ ಹಸೀನಾ ಈ ಸಂದರ್ಭದಲ್ಲಿ ಘೋಷಿಸಿದರು. ಆಗಸ್ಟ್ 5, 2024 ರಂದು ಭಾರತಕ್ಕೆ ಬಂದ ನಂತರ ಅವರು ಇದೇ ಮೊದಲ ಬಾರಿಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ನನ್ನ ಪ್ರೀತಿಯ ಬಾಂಗ್ಲಾದೇಶ ಅನುಭವಿಸುತ್ತಿರುವ ಸಂಕಷ್ಟವನ್ನು ನಾನು ನೋಡುತ್ತಿದ್ದೇನೆ. ಇದು ನಾವು ಕಟ್ಟಿದ ಬಾಂಗ್ಲಾದೇಶವಲ್ಲ, ಹಾಗೂ 1971 ರ ವಿಮೋಚನಾ ಸಂಗ್ರಾಮದಲ್ಲಿ 30 ಲಕ್ಷ ಜನರು ತಮ್ಮ ಪ್ರಾಣತ್ಯಾಗ ಮಾಡಿದ್ದು ಈ ರೀತಿಯ ದೇಶಕ್ಕಾಗಿ ಅಲ್ಲ ಎಂದು ಹಸೀನಾ ಭಾವುಕರಾಗಿ ನುಡಿದರು.
#LISTEN | In a virtual interaction with the media in Delhi, while speaking on 2 years of 2024 violent protest in the country – former Bangladesh PM Sheikh Hasina says, “Muhammad Yunus himself said this was a meticulously designed movement, led by a mastermind. His own words… pic.twitter.com/b26cDRnExO
— ANI (@ANI) August 5, 2026
ಹಸೀನಾ ಹೇಳಿದ್ದೇನು?
ಮೀಸಲಾತಿ ಸುಧಾರಣೆ ಚಳವಳಿಯನ್ನು ತಮ್ಮ ಸರ್ಕಾರವು ಮಾತುಕತೆ, ಕಾನೂನು ಪ್ರಕ್ರಿಯೆ ಮತ್ತು ತಾಳ್ಮೆಯ ಮೂಲಕ ಬಗೆಹರಿಸಲು ಸತತ ಪ್ರಯತ್ನ ನಡೆಸಿತ್ತು. ಆದರೆ ಸಂಘಟಿತ ಗುಂಪುಗಳು ಈ ಚಳವಳಿಯನ್ನು ತಮ್ಮ ರಾಜಕೀಯ ದುರುದ್ದೇಶ ಸಾಧನೆಗೆ ದುರ್ಬಳಕೆ ಮಾಡಿಕೊಂಡವು. ಇದನ್ನೂ ಓದಿ: ಭಾರತದ ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆ ಕ್ರಿಶ್ಚಿಯನ್ನರ ಮೇಲಿನ ದಾಳಿ – ಅಮೆರಿಕ ಸಂಸದ ಟೀಕೆ
ಜುಲೈ 15, 2024 ರ ನಂತರ ಪ್ರತಿಭಟನೆಯು ವ್ಯಾಪಕ ಕೊಲೆ, ಬೆಂಕಿ ಹಚ್ಚುವಿಕೆ, ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮತ್ತು ಪೋಲಿಸರ ಮೇಲಿನ ದಾಳಿಯಾಗಿ ಭೀಕರ ರೂಪ ಪಡೆಯಿತು.
#LISTEN | In a virtual interaction with the media in Delhi, former Bangladesh PM Sheikh Hasina says, “…I speak as someone who has spent her life with the people of Bangladesh and was forced away from my country, but I was never separated from my people…”
(Source:… pic.twitter.com/R3kL0mXKgB
— ANI (@ANI) August 5, 2026
1971 ರ ವಿಮೋಚನಾ ಯುದ್ಧದ ಸಂಕೇತಗಳು, ಅಲ್ಪಸಂಖ್ಯಾತರು ಹಾಗೂ ಪತ್ರಕರ್ತರನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು. ಅಲ್ಲದೆ, ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಐತಿಹಾಸಿಕ ‘ಧನ್ಮಂಡಿ 32’ ನಿವಾಸವನ್ನು ಧ್ವಂಸಗೊಳಿಸುವ ಮೂಲಕ ದೇಶದ ವಿಮೋಚನಾ ಇತಿಹಾಸವನ್ನೇ ಅಳಿಸಿಹಾಕಲು ಯತ್ನಿಸಲಾಗಿದೆ.
ತಮ್ಮ ನಿರ್ಗಮನದ ನಂತರ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ಆವಾಮಿ ಲೀಗ್ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ವ್ಯವಸ್ಥಿತ ರಾಜಕೀಯ ದೌರ್ಜನ್ಯ ಎಸಗುತ್ತಿದೆ. ಸಾವಿರಾರು ಜನರನ್ನು ಕೊಲ್ಲಲಾಗಿದೆ, ಜೈಲಿಗಟ್ಟಲಾಗಿದೆ ಮತ್ತು ಲಕ್ಷಾಂತರ ಜನರ ಮೇಲೆ ಸುಳ್ಳು ಮೊಕದ್ದಮೆ ಹೂಡಲಾಗಿದೆ. ಜೊತೆಗೆ ತಮ್ಮ ಸರ್ಕಾರ ರಚಿಸಿದ್ದ ನ್ಯಾಯಾಂಗ ತನಿಖೆಯನ್ನು ಮಧ್ಯಂತರ ಆಡಳಿತವು ತಡೆಹಿಡಿದಿದೆ.
ಭಾರತ ಸರ್ಕಾರವು ಈ ಪತ್ರಿಕಾಗೋಷ್ಠಿಯಿಂದ ಅಂತರ ಕಾಯ್ದುಕೊಂಡಿದ್ದು, ಸಂವಾದದಲ್ಲಿ ಮಾಡಲಾದ ಯಾವುದೇ ಹೇಳಿಕೆಗಳನ್ನು ನವದೆಹಲಿ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
