ಕೊಪ್ಪಳ: ಟಾಟಾ ಏಸ್ (Tata Ace) ಹಾಗೂ ಬೈಕ್ (Bike) ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppal) ತಾಲೂಕಿನ ಬಂಡಿ ಹರ್ಲಾಪುರ (Bandi Harlapur) ಗ್ರಾಮದ ಬಳಿ ನಡೆದಿದೆ.
ಬಂಡಿ ಹರ್ಲಾಪುರ ನಿವಾಸಿಗಳಾದ ಹುಲ್ಲೇಶ್ ವಾಲಿಕಾರ, ಮಾರುತಿ ಮೃತ ದುರ್ದೈವಿಗಳು. ಇಬ್ಬರು ಯುವಕರು ಮುಕುಂದ್ ಸ್ಟೀಲ್ ಕಂಪನಿಯ ಉದ್ಯೋಗಿಗಳಾಗಿದ್ದರು. ಮಂಗಳವಾರ ರಾತ್ರಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: IIT ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಪ್ರೊಫೆಸರ್ಗೆ ರಜೆ ನೀಡಿ ಕ್ಯಾಂಪಸ್ನಿಂದ ಗೇಟ್ಪಾಸ್
ಘಟನಾ ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು. ಇದನ್ನೂ ಓದಿ: ಶಾಸಕರಾದ ಬಳಿಕ ಮೊದಲ ಬಾರಿಗೆ ಹುಟ್ಟೂರಿಗೆ ಟಿವಿಕೆ ಶಾಸಕ ಸುನೀಲ್ ಆನಂದ್ ಭೇಟಿ

