ವಾಷಿಂಗ್ಟನ್: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ(FCRA) ತಿದ್ದುಪಡಿ ಮಾಡಲು ಮುಂದಾಗಿರುವ ಭಾರತ ಸರ್ಕಾರದ (Indian Government) ಕ್ರಮ ಕ್ರೈಸ್ತರ ವಿರುದ್ಧದ ಸ್ಪಷ್ಟ ದಾಳಿ ಎಂದು ಅಮೆರಿಕದ ಸಂಸದ ರೈಲಿ ಮೂರ್(Riley Moore) ಟೀಕಿಸಿದ್ದಾರೆ.
ಈ ಮಸೂದೆಯು ಕ್ರಿಶ್ಚಿಯನ್ನರ(Christians) ಮೇಲಿನ ಸ್ಪಷ್ಟ ದಾಳಿ ಎಂದು ಬಣ್ಣಿಸಿರುವ ಅವರು, ಇದು ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆಯೂ ಪರಿಣಾಮ ಬೀರಬಹುದು ಎಂದು ಎಕ್ಸ್‌ನಲ್ಲಿ ಎಚ್ಚರಿಸಿದ್ದಾರೆ.
ಪ್ರಸ್ತಾವಿತ ತಿದ್ದುಪಡಿಗಳು ಸರ್ಕಾರಕ್ಕೆ ಚರ್ಚ್‌ಗಳು ಮತ್ತು ಧಾರ್ಮಿಕ ಚಾರಿಟಿ ಸಂಸ್ಥೆಗಳ ಆಸ್ತಿಗಳ ನಿಯಂತ್ರಣವನ್ನು ಪಡೆದುಕೊಳ್ಳಲು ಅವಕಾಶ ನೀಡುತ್ತವೆ ಎಂದು ಮೂರ್ ಆರೋಪಿಸಿದ್ದಾರೆ. ಸಂಸತ್ತಿನ ಪ್ರಸ್ತುತ ಮುಂಗಾರು ಅಧಿವೇಶನದಲ್ಲಿ ‘ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2026’ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಂದಿರುವುದು ವಿಶೇಷ.
Christians have been in India since St. Thomas the Apostle traveled to the Malabar Coast just decades after the resurrection of our Lord Jesus Christ.
But despite this long Christian history, India’s Parliament is considering amending Foreign Contribution Regulation Amendment…
— Rep. Riley M. Moore (@RepRileyMoore) August 4, 2026
ಯೇಸುಕ್ರಿಸ್ತರ ಪುನರುತ್ಥಾನದ ಕೆಲವು ದಶಕಗಳ ನಂತರ ಸೇಂಟ್ ಥಾಮಸ್ ಅಪೋಸ್ಟಲ್ ಅವರು ಮಲಬಾರ್ ಕರಾವಳಿಗೆ ಪ್ರಯಾಣ ಬೆಳೆಸಿದಾಗಿನಿಂದಲೂ ಕ್ರಿಶ್ಚಿಯನ್ನರು ಭಾರತದಲ್ಲಿದ್ದಾರೆ. ಆದರೆ ಈ ಸುದೀರ್ಘ ಇತಿಹಾಸದ ಹೊರತಾಗಿಯೂ, ಚರ್ಚ್‌ಗಳು ಮತ್ತು ಧಾರ್ಮಿಕ ಚಾರಿಟಿಗಳ ಮೇಲಿನ ಸರ್ಕಾರಿ ಸ್ವಾಧೀನಕ್ಕೆ ಅವಕಾಶ ನೀಡಲು ಭಾರತದ ಸಂಸತ್ತು ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ (FCRA) ನಿಯಮಗಳನ್ನು ಬದಲಾಯಿಸಲು ಪರಿಶೀಲಿಸುತ್ತಿದೆ. ಇದು ಕ್ರಿಶ್ಚಿಯನ್ನರ ಮೇಲಿನ ಸ್ಪಷ್ಟ ದಾಳಿಯಾಗಿದೆ. ಈ ಮಸೂದೆಯು ಇದೇ ರೀತಿ ಮುಂದುವರಿದರೆ, ಇದು ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಮುಖ ಕಳವಳದ ವಿಷಯವಾಗಲಿದೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: Public TV Explainer | ಸಮುದ್ರದಾಳದ ಸಂಪತ್ತಿನ ಹುಡುಕಾಟ – 84,084 ಕೋಟಿ ವೆಚ್ಚದ ‘ಸಮುದ್ರ ಮಂಥನ’ ಯೋಜನೆ ಏನು?
ಜುಲೈ 15, 2026 ರ ವೇಳೆಗೆ ಭಾರತದಲ್ಲಿ 14,449 ಸಕ್ರಿಯ FCRA ನೋಂದಣಿಗಳಿದ್ದವು. 22,498 ನೋಂದಣಿಗಳನ್ನು ರದ್ದುಗೊಳಿಸಲಾಗಿದ್ದು, 15,212 ನೋಂದಣಿಗಳ ಅವಧಿ ಮುಕ್ತಾಯಗೊಂಡಿದೆ. 2019 ಮತ್ತು 2022 ರ ನಡುವೆ, ಈ ಕಾಯ್ದೆಯಡಿಯಲ್ಲಿ ನೋಂದಾಯಿತ ಸಂಸ್ಥೆಗಳು 55,741 ಕೋಟಿ ರೂ. ಮೌಲ್ಯದ ವಿದೇಶಿ ಕೊಡುಗೆಗಳನ್ನು ಸ್ವೀಕರಿಸಿವೆ.
