International
ವಿಡಿಯೋ: ಕಮೋಡ್‍ನಲ್ಲಿದ್ದ 6 ಅಡಿ ಉದ್ದದ ಹಾವನ್ನ ಬರಿಗೈಯಲ್ಲೇ ಹೊರತೆಗೆದ!

ವಾಷಿಂಗ್ಟನ್: ನಾರ್ತ್ ಕ್ಯಾರೊಲಿನಾದ ವ್ಯಕ್ತಿಯೊಬ್ಬ ತನ್ನ ಪಕ್ಕದ ಮನೆಯವರ ಸಹಾಯಕ್ಕೆ ಧಾವಿಸಿ ಬರಿಗೈಯಲ್ಲೇ 6 ಅಡಿ ಉದ್ದದ ಹಾವನ್ನ ಕಮೋಡ್‍ನಿಂದ ಎಳೆದು ತೆಗೆದಿದ್ದಾರೆ.
88 ವರ್ಷದ ವೃದ್ಧರೊಬ್ಬರ ಮನೆಯಲ್ಲಿ ಕಳೆದ 6 ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಹಾವು ಕಾಣಿಸಿಕೊಂಡಿತ್ತು. ಟಾಯ್ಲೆಟ್‍ನ ಕಮೋಡ್‍ನಲ್ಲಿದ್ದ ಹಾವನ್ನ ಹೊರಗೆ ತೆಗೆಯಲು ಪಕ್ಕದ ಮನೆಯ ಮೈಕ್ ಗ್ರೀನಿಗೆ ಸಹಾಯ ಕೇಳಿದ್ದರು.
ಗ್ರೀನಿ ವೃದ್ಧರ ಮನೆಗೆ ಹೋಗಿ ಕಮೋಡ್‍ನಲ್ಲಿದ್ದ ಹಾವನ್ನ ಬಾಲ ಹಿಡಿದು ಬರಿಗೈಯಲ್ಲೇ ಎಳೆದು ಹೊರಗೆ ತೆಗೆದಿದ್ದಾರೆ. ಇದನ್ನ ಮತ್ತೊಬ್ಬ ವ್ಯಕ್ತಿ ವಿಡಿಯೋ ಮಾಡಿದ್ದು, ಮೈ ಜುಮ್ಮೆನಿಸುವಂತಿದೆ. ಗ್ರೀನಿ 6 ಅಡಿ ಉದ್ದದ ಹಾವನ್ನ ಕಮೋಡ್‍ನಿಂದ ಹೊರತೆಗೆದ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳಲಾಗಿದೆ.
ಎಷ್ಟು ದೊಡ್ಡಾದಾಗಿದೆ ಈ ಹಾವು ನೋಡು. ನಾನು ಹೇಳ್ದೆ ತಾನೇ, ಇದು ತುಂಬಾ ದೊಡ್ಡ ಹಾವು ಎಂದು ವೃದ್ಧ ವ್ಯಕ್ತಿ ಹೇಳೋದನ್ನ ವಿಡಿಯೋದಲ್ಲಿ ಕೇಳಬಹುದು.
ಪಕ್ಕದ ಮನೆಯಿಂದ ಹೊರತೆಗೆದ ಹಾವುಗಳಲ್ಲಿ ಈವರೆಗೆ ಇದೇ ಅತ್ಯಂತ ದೊಡ್ಡದು ಎಂದು ಗ್ರೀನಿ ಹೇಳಿದ್ದಾರೆ. ವೃದ್ಧ ವ್ಯಕ್ತಿಯ ಬಗ್ಗೆ ಹೇಳುತ್ತಾ, ಅವರು ಒಂಟಿಯಾಗಿ ವಾಸ ಮಾಡ್ತಾರೆ, ಆರೋಗ್ಯವಾಗಿದ್ದಾರೆ. ಆದ್ರೆ ಹಾವು ಹಿಡಿಯೋದಕ್ಕೆಲ್ಲಾ ಅವರಿಗೆ ಬರಲ್ಲ ಎಂದಿದ್ದಾರೆ.
ತಾನು ಹೊರತೆಗೆದ ಹಾವು ಅಪಾಯಕಾರಿಯಲ್ಲ. ಅದನ್ನ ಹತ್ತಿರದ ಬಯಲಿನಲ್ಲಿ ಬಿಟ್ಟೆ ಎಂದು ಗ್ರೀನಿ ಹೇಳಿದ್ದಾರೆ.
(For licensing or usage contact licensing @viralhog.com)
Posted by Mike Greene on Thursday, August 17, 2017
