ನವದೆಹಲಿ: ಕೃಷಿಕರ ಆದಾಯವನ್ನು 2022ರ ವೇಳೆಗೆ ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿರುವ ಕೇಂದ್ರ ಸರಕಾರ ’16 ಅಂಶಗಳ ಯೋಜನೆ’ಯನ್ನು ಕೇಂದ್ರ ಬಜೆಟ್ 2020ರಲ್ಲಿ ಘೋಷಣೆ ಮಾಡಿದೆ. ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ವಲಯದ ಅಭಿವೃದ್ಧಿಗೆ 2.83 ಲಕ್ಷ ಕೋಟಿ ರೂ. ಮೀಸಲು ಇಟ್ಟಿರುವುದಾಗಿ ಘೋಷಣೆ ಮಾಡಿದರು.
Advertisement
* ಕೃಷಿ ವಲಯ ಮತ್ತು ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗೆ ಒಟ್ಟು 2.83 ಕೋಟಿ ರೂ. ಮೀಸಲು
* 20 ಲಕ್ಷ ರೈತರಿಗೆ ಸೋಲಾರ್ ಪಂಪ್ ಅಳವಡಿಸಲು ಸರ್ಕಾರದ ನೆರವು
* 15 ಲಕ್ಷ ರೈತರಿಗೆ ಸರ್ಕಾರದಿಂದ ಗ್ರಿಡ್ ಕನೆಕ್ಟಡ್ ಪಂಪ್ ವಿತರಿಸಲಾಗುವುದು.
* ಅನ್ನದಾತರಿಗಾಗಿ ಕಿಸಾನ್ ರೈಲು ಯೋಜನೆ. ಈ ವಿಶೇಷ ಯೋಜನೆಯ ಮೂಲಕ ರೈತರು ಅತಿಬೇಗ ಕೆಡುವ ಉತ್ಪನ್ನಗಳನ್ನು ಶಿಥೀಲಿಕರಣದ ಸ್ಟೋರೆಜ್ ಮೂಲಕ ಮಾರುಕಟ್ಟೆಗೆ ತಲುಪಿಸುವ ಸರಳ ವ್ಯವಸ್ಥೆ.
* ವಿಮಾನಯಾನ ಸಚಿವಾಲಯದಿಂದ ಕೃಷಿ ಉಡಾನ್ ಯೋಜನೆಗೆ ಚಾಲನೆ ನೀಡಲಾಗುವುದು. ಈ ಯೋಜನೆಯ ಮೂಲಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸುವುದು.
* ಅಗ್ರಿಕಲ್ಚರ್ ಕ್ರೆಡಿಟ್ ಕಾರ್ಡ್ ಗಾಗಿ 2021ರಲ್ಲಿ 15 ಲಕ್ಷ ರೂ. ಮೀಸಲು.
* ಹಾಲು ಉತ್ಪದನೆಯನ್ನು ದ್ವಿಗುಣಗೊಳಿಸುವುದು. 53 ಮೆಟ್ರಿಕ್ ಟನ್ ನಿಂದ 108 ಮೆಟ್ರಿಕ್ ಟನ್‍ಗೆ ಹೆಚ್ಚಿಸುವ ಗುರಿ.
* ಕೃಷಿಕರಿಗೆ ಸಾಲ ಸೌಲಭ್ಯ ಕಲ್ಪಿಸಲು 15 ಲಕ್ಷ ಕೋಟಿ ರೂ.
* ಬರಡು ಭೂಮಿ ಹೊಂದಿರುವ ರೈತರಿಗೆ ಸೌರ ವಿದ್ಯುತ್ ಉತ್ಪಾದಕ ಘಟಕಗಳನ್ನು ಸ್ಥಾಪಿಸಲು ಸಹಾಯ.
Advertisement
Advertisement
* ಮಹಿಳಾ ಕೃಷಿಕರ ಉತ್ತೇಜನಕ್ಕೆ ಧಾನ್ಯಲಕ್ಷ್ಮೀ ಯೋಜನೆ.
* ಇ-ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್ ಸ್ಥಾಪನೆ.
* 2022-23ರ ವೇಳೆಗೆ 200 ಲಕ್ಷ ಟನ್‍ಗಳ ಮೀನು ಉತ್ಪಾದನೆ ಗುರಿ.
* ಸಾಗರ್ ಮಿತ್ರ ಯೋಜನೆ ಮತ್ತು ಮೀನು ಉತ್ಪಾದಕ ಸಂಘಗಳ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ.
* 500 ಮೀನುಗಾರರ ಸಂಘಗಳ ಸ್ಥಾಪನೆ.
* ದೀನ್ ದಯಾಳ್ ಅಂತ್ಯೋದಯ ಯೋಜನೆ ಮೂಲಕ 58 ಲಕ್ಷ ಸ್ವಸಹಾಯ ಸಂಘಗಳ ಆರಂಭಿಸಿ ಬಲವರ್ಧನೆ.
* ನಬಾರ್ಡ್ ಯೋಜನೆ ವಿಸ್ತರಣೆ. ರೈತರಿಗೆ ವಾರ್ಷಿಕ ಕೃಷಿ ಸಾಲ ನೀಡಲು 15 ಲಕ್ಷ ಕೋಟಿ ರೂ.
* 2016ರ ಮಾದರಿಯ ಕೃಷಿ ಭೂಮಿ ಗುತ್ತಿಗೆ, 2017ರ ಕೃಷಿ ಉತ್ಪನ್ನ, ಜಾನುವಾರ ಮತ್ತು ಮಾರಾಟ ಕಾಯಿದೆ ಹಾಗೂ 2018ರ ಜಾನುವಾರುಗಳನ್ನು ಒಳಗೊಂಡ ಕೃಷಿ ಮತ್ತು ಕೃಷಿ ಉತ್ಪನ್ನ ಕಾಯಿದೆಗಳಿಗೆ ಉತ್ತೇಜನ.