ಟೆಹ್ರಾನ್: ಹಾರ್ಮುಜ್ (Strait of Hormuz) ಬಳಿ ಮರದ ಬೋಟ್‌ಗೆ ಬೆಂಕಿಗೆ ಆಹುತಿಯಾಗಿ ಮುಳುಗಿದ ಪರಿಣಾಮ ಭಾರತೀಯ ನಾವಿಕನೊಬ್ಬ (Indian Sailor) ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಬೋಟ್‌ನಲ್ಲಿ 18 ಭಾರತೀಯ ಸಿಬ್ಬಂದಿ ಇದ್ದರು. ಬೋಟ್ ಪಕ್ಕದಲ್ಲೇ ಹಾದುಹೋಗುತ್ತಿದ್ದ ಹಡಗು ಅವರನ್ನು ರಕ್ಷಿಸಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಗಾಯಗೊಂಡ ನಾವಿಕರು ದುಬೈನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ದಿಗ್ಬಂಧನದ ಮಧ್ಯೆ ಹಾರ್ಮೂಜ್ ದಾಟಿತು 4,700 ಕೋಟಿ ರೂ. ಮೌಲ್ಯದ ಸೂಪರ್‌ಯಾಚ್!
ಬೋಟ್‌ನಿಂದ ರಕ್ಷಿಸಲ್ಪಟ್ಟ ಭಾರತೀಯ ನಾವಿಕರನ್ನು ನಮ್ಮ ಅಧಿಕಾರಿಗಳು ಭೇಟಿ ಮಾಡಿದ್ದಾರೆ. ನಾವು ಬೋಟ್ ಮಾಲೀಕರೊಂದಿಗೆ ಸಂಪರ್ಕದಲ್ಲಿದ್ದೇವೆ. ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತೇವೆ ಎಂದು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ವಿಶ್ವದ ತೈಲ ಪೂರೈಕೆಯ ಪ್ರಮುಖ ಜಲಮಾರ್ಗ ಹಾರ್ಮುಜ್ ಮೇಲೆ ಇರಾನ್ ಹಿಡಿತ ಸಾಧಿಸಿದೆ. ಜಲಸಂಧಿಯಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹೊತ್ತಲ್ಲೇ ಈ ಘಟನೆ ನಡೆದಿದೆ. ಇದನ್ನೂ ಓದಿ: Iran War| ನಾಳೆಗೆ 60 ದಿನಗಳ ಡೆಡ್‌ಲೈನ್ ಅಂತ್ಯ – ಸಂಕಷ್ಟದಲ್ಲಿ ಟ್ರಂಪ್!
ಶುಕ್ರವಾರ ಹಾರ್ಮುಜ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಎರಡು ಹಡಗುಗಳನ್ನು ಗುರಿಯಾಗಿಸಿಕೊಂಡು ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕದ ಪಡೆಗಳು ಆಕ್ರಮಣವನ್ನು ಪ್ರಾರಂಭಿಸಿವೆ ಎಂದು ಇರಾನ್ ಆರೋಪಿಸಿದೆ.

