ಶಿವಮೊಗ್ಗ: ಮಂಗಳೂರು ಸ್ಫೋಟ (Mangaluru Blast) ಪ್ರಕರಣ ಸಂಬಂಧ ರಾಜ್ಯದಲ್ಲಿ ಎನ್‍ಐಎ (NIA) ದಾಳಿ ಮುಂದುವರೆದಿದೆ. ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ (Thirthahalli) ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಎನ್‍ಐಎ ಅಧಿಕಾರಿಗಳು, ಮೂವರು ಶಂಕಿತ ಉಗ್ರರ ಮನೆ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಜಾಲಾಡಿದ್ದಾರೆ.
ಮಾಜ್, ಮತಿನ್ ಮತ್ತು ಶಾರೀಕ್ ಮನೆ ಸೇರಿ ಅಕ್ಕಪಕ್ಕದ ಮನೆಗಳಿಗೂ ತೆರಳಿದ ಎನ್‍ಐಎ ಅಧಿಕಾರಿಗಳು, ಮೊದಲು ಮೊಬೈಲ್ ಸ್ವಿಚ್ ಆಫ್ ಮಾಡಿಸಿ, ಫೋಟೋ, ವಿಡಿಯೋ ಮಾಡುವುದನ್ನು ನಿರ್ಬಂಧಿಸಿ, ಶಂಕಿತ ಉಗ್ರರ ಹಣಕಾಸು ಮೂಲ, ಹಿನ್ನೆಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಹಿಂದುತ್ವ, ಧರ್ಮ, ದೇವರುಗಳನ್ನ ನಂಬಬೇಡಿ – ಜನತೆಗೆ ಸಿದ್ದರಾಮಯ್ಯ ಮನವಿ
Advertisement
Advertisement
ಇದೇ ವೇಳೆ, ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ (Kimmane Ratnakar) ಕಚೇರಿ ಇರುವ ಕಟ್ಟಡದ ಮೇಲೆಯೂ ಎನ್‍ಐಎ ದಾಳಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಿಮ್ಮನೆ ರತ್ನಾಕರ್, ಕಚೇರಿ ಕಟ್ಟಡ ಬಾಡಿಗೆ ಪಡೆದಿರುವ ಬಗ್ಗೆ ಎನ್‍ಐಎ ಅಧಿಕಾರಿಗಳು ಮಾಹಿತಿ ಕೇಳಿದ್ದರು. ಈ ಕಟ್ಟಡ ಹಾಸಿಂ ಎನ್ನುವವರಿಗೆ ಸೇರಿದ್ದು ಈ ಬಗ್ಗೆ ವಿವರ ನೀಡಿದ್ದೇನೆ. ಆದರೆ ಬಿಜೆಪಿಯವರು ನನ್ನ ಮನೆ ಮೇಲೆ ಎನ್‍ಐಎ ದಾಳಿ ನಡೆದಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k