Latest
ಪ್ರತಿಭಟನಾನಿರತ ರೈತರಿಗೆ ಬಿಸ್ಕೆಟ್, ಬಾಳೆಹಣ್ಣು ಹಂಚಿದ 4ರ ಪೋರ

– ರೈತ ಕುಟುಂಬದಿಂದ್ಲೇ ಬಂದವರೆಂದ ಬಾಲಕನ ತಂದೆ
– ಮನೆಯಿಂದಲೇ ರೈತರಿಗೆ ಆಹಾರ ನೀಡ್ತಿರೋ ತಂದೆ-ಮಗ
ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ- ಗಾಜಿಯಾಬಾದ್ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಯುತ್ತಿದ್ದು, ಈ ಮಧ್ಯೆ 4 ವರ್ಷದ ಪುಟ್ಟ ಬಾಲಕನೊಬ್ಬನ ಕೆಲಸ ಗಮನ ಸೆಳೆದಿದೆ.
ರೆಹಾನ್ ಎಂಬ 4 ವರ್ಷದ ಪುಟ್ಟ ಪೋರ ಪ್ರತಿಭಟನಾನಿರತ ರೈತರಿಗೆ ಬಾಳೆ ಹಣ್ಣು ಹಾಗೂ ಬಿಸ್ಕೆಟ್ ಹಂಚಿದ್ದಾನೆ. ಬಾಲಕನ ಈ ಮಾನವೀಯತೆಯ ಗುಣಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಈ ಪ್ರತಿಭಟನೆಯ ಸಂರ್ದಭದಲ್ಲಿ ಹಲವರು ರೈತರಿಗೆ ಆಹಾರಗಳನ್ನು ನೀಡುತ್ತಾ ಬಂದಿದ್ದಾರೆ.
ಬಾಲಕ ರೆಹಾನ್ ತನ್ನ ತಂದೆಯ ಜೊತೆಗೆ ಪ್ರತಿಬಟನೆ ನಡೆಯುತ್ತಿರುವ ಗಡಿಗೆ ಬಂದು ಬಿಸ್ಕೆಟ್ ಹಾಗೂ ರೈತರಿಗೆ ಹಂಚಿದ್ದಾನೆ. ವೈಶಾಲಿಯಲ್ಲಿ ವಾಸವಾಗಿರುವ ತೆಹತಬ್ ಅಲಂ ಹಾಗೂ ಪುತ್ರ ರೇಹಾನ್ ಪ್ರತಿದಿನ ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದಾರೆ. ಅಲ್ಲದೆ ರೈತರಿಗೆ ತಮ್ಮ ಕೈದಾಷ್ಟು ಆಹಾರವನ್ನು ಹಂಚುತ್ತಿದ್ದಾರೆ.
ನಾವು ಕೂಡ ಬಿಹಾರದಿಂದ ರೈತ ಕುಟುಂಬದಿಂದಲೇ ಬಂದವರು. ಹೀಗಾಗಿ ರೈತರಿಗೆ ನಾವು ಸ್ನ್ಯಾಕ್ಸ್ ನೀಡುತ್ತಿದ್ದೇವೆ. ಅಲ್ಲಿ ಬಹಳಷ್ಟು ಮಂದಿ ರೈತರಿದ್ದು, ಅವರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ನಾವು ಭಾವಿಸಿದ್ದೇವೆ. ಹೀಗಾಗಿ ನಾವು ಪ್ರತಿದಿನ ಸ್ಥಳಕ್ಕೆ ಬಂದು ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಮದು ಮೆಹ್ತಾಬ್ ಅಲಂ ತಿಳಿಸಿದ್ದಾರೆ.
ಅಲಂ ಅವರು ತಿಂಗಳಿಗೆ ತಮಗೆ ಬರುವ ಆದಾಯದಲ್ಲಿ ಸುಮಾರು 20 ಸಾವಿ ಖರ್ಚು ಮಾಡಿ ಆಹಾರ ಸಾಮಗ್ರಿಗಳನ್ನು ಖರೀದಿ ಮಾಡಿ, ರೈತರಿಗೆ ಹಂಚುತ್ತಿದ್ದೇನೆ. ನನ್ನ ಕೆಲಸದಿಂದ ತಂದೆ ತುಂಬಾನೆ ಖುಷಿಯಾಗಿದ್ದಾರೆ. ಅಲ್ಲದೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ ಎಂದು ಅಲಂ ಹೇಳಿದ್ದಾರೆ.
