ಬೆಂಗಳೂರು: ದುಬಾರಿ ಆಗಿರುವ ಫುಡ್ ಆ್ಯಪ್‍ಗಳಿಗೆ ಹೋಟೆಲ್ ಮಾಲೀಕರು ಕೌಂಟರ್ ನೀಡಲು ಸಿದ್ಧರಾಗಿದ್ದು, ಫುಡ್‍ಗಳನ್ನು ಆರ್ಡರ್ ಮಾಡಲು ಎಂದೇ ಹೊಸ ಆ್ಯಪ್‍ಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದ್ದಾರೆ.
ಹೌದು, ಇತ್ತೀಚೆಗೆ ಸ್ವಿಗ್ಗಿ (Swiggy), ಝೊಮ್ಯಾಟೋದಂತಹ (Zomato) ಫುಡ್ ಆ್ಯಪ್‍ಗಳು ಲೂಟಿಗಿಳಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆ್ಯಪ್ ಮೊರೆ ಹೋಗಿರುವ ಬೆಂಗಳೂರು ಹೋಟೆಲ್ (Hotel) ಮಾಲೀಕರು ಒಪನ್ ನೆಟ್‍ವರ್ಕ್ ಡಿಜಿಟಲ್ ಕಾಮರ್ಸ್ ಆ್ಯಪ್ ಜೊತೆ ಟೈಅಪ್ ಆಗೋಕೆ ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಎನ್‍ಡಿಸಿ ಆ್ಯಪ್ ಪ್ರತಿನಿಧಿಗಳ ಜೊತೆ ಹೋಟೆಲ್ ಅಸೋಸಿಯೇಷನ್ ಸಭೆಯನ್ನು ಮಾಡಿದೆ. ಈ ಆ್ಯಪ್‍ನಿಂದ ಗ್ರಾಹಕರು ಹಾಗೂ ಮಾಲೀಕರ ಹಣ ಸುಮಾರು 15% ರಷ್ಟು ಉಳಿತಾಯ ಆಗುವ ನಿರೀಕ್ಷೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ.
Advertisement
Advertisement
ಸ್ವಿಗ್ಗಿ- ಝೊಮ್ಯಾಟೋ ಆನ್‍ಲೈನ್‍ನಲ್ಲಿ ಫುಡ್ ಡೆಲಿವರಿ ಮಾಡುತ್ತಿವೆ. ಹೋಟೆಲ್ ಮೆನ್ಯು ಕಾರ್ಡ್‍ಗಿಂತ ಶೇ.40ರಷ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದ್ದು, ಫುಡ್ ಡೆಲಿವರಿ ನೆಪದಲ್ಲಿ ಗ್ರಾಹಕರ ಬಳಿ ಹಗಲು ದರೋಡೆ ಮಾಡುತ್ತಿರುವ ಆರೋಪ ಕೇಳಿಬರುತ್ತಿವೆ. ಇದನ್ನೂ ಓದಿ: ವರುಣಾದಲ್ಲಿ ಸಿದ್ದು-ಬಿಎಸ್‌ವೈ ಹೊಂದಾಣಿಕೆ ಮಾಡ್ಕೊಂಡಿದ್ದಾರೆ: ಹೆಚ್‌ಡಿಡಿ ಹೊಸ ಬಾಂಬ್
Advertisement
ಅತ್ತ ಮಾಲೀಕರಿಗೂ ಹಣ ಸೇರಲ್ಲ. ಇತ್ತ ಗ್ರಾಹಕರ ಜೇಬಿಗೂ ಕತ್ತರಿಯಾಗಿದ್ದು, ಹೆಚ್ಚಿನ ಹಣ ಪಡೆಯದಂತೆ ಆ್ಯಪ್‍ಗಳಿಗೆ ಹಲವು ಬಾರಿ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ. ಆದರೆ ಸ್ವಿಗ್ಗಿ- ಝೊಮ್ಯಾಟೋ, ನಾವು ನಷ್ಟದಲ್ಲಿ ಇದ್ದೇವೆ ಅಂತ ಕಾರಣ ನೀಡುತ್ತೀವೆ. ಅವರು ಹೇಳುತ್ತಿರುವುದು ಸುಳ್ಳು. ಅವರು ನಷ್ಟದಲ್ಲಿ ಇಲ್ಲ. ಆದರೂ ಗ್ರಾಹಕರ ಬಳಿ ಸುಲಿಗೆ ಮಾಡುತ್ತಿವೆ ಎಂದು ಹೋಟೆಲ್ ಅಸೋಸಿಯೇಷನ್ ಆರೋಪಿಸಿವೆ.
Advertisement
ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಇದೀಗ ಹೊಸ ಪ್ಲಾನ್ ಒಂದನ್ನ ರಚಿಸಿದ್ದಾರೆ. ಬೆಂಗಳೂರಿನವರು (Bengaluru) ದೇಶದಲ್ಲೇ ಹೆಚ್ಚು ಆನ್‍ಲೈನ್ ಆರ್ಡರ್ ಮಾಡ್ತಾರೆ. ಹೀಗಾಗಿ ಸ್ವಿಗ್ಗಿ – ಝೊಮ್ಯಾಟೋ ಆ್ಯಪ್‍ಗಳಿಗೆ ಹೋಟೆಲ್ ಮಾಲೀಕರು ಟಕ್ಕರ್ ನೀಡಲು ಸಿದ್ಧರಾಗಿದ್ದು, ಕೇಂದ್ರ ಸರ್ಕಾರದ ಹೊಸ ಆ್ಯಪ್ ಮೊರೆ ಹೋಗಿದ್ದಾರೆ. ಓಪನ್ ನೆಟ್‍ವರ್ಕ್ ಡಿಜಿಟಲ್ ಕಾಮರ್ಸ್ ಆ್ಯಪ್‍ನಿಂದ ಗ್ರಾಹಕರು ಹಾಗೂ ಮಾಲೀಕರ ಹಣ ಉಳಿತಾಯ ನಿರೀಕ್ಷೆಯಿದೆ. ಸ್ವಿಗ್ಗಿ ಹಾಗೂ ಝೊಮ್ಯಾಟೋಗಿಂತ ಶೇ.20ರಷ್ಟು ಉಳಿತಾಯ ನಿರೀಕ್ಷೆಯಿದೆ ಎಂದು ONDC ಆ್ಯಪ್ ಪ್ರತಿನಿಧಿ, ಹೊಟೇಲ್ ಮಾಲೀಕರ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದನ್ನೂ ಓದಿ: ದಾವಣಗೆರೆ ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ್ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ