ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ (National Herald Case) ಸಂಬಂಧಿಸಿದಂತೆ ವಿಚಾರಣೆಗೆ ನಾಳೆ ಅ.7ರಂದು ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ D.K Shivakumar ಮತ್ತು ಸಂಸದ ಡಿ.ಕೆ ಸುರೇಶ್ಗೆ (D.K Suresh) ಜಾರಿ ನಿರ್ದೇಶನಾಲಯ (ED) ನೋಟಿಸ್ ನೀಡಿದೆ.
Advertisement
ಡಿ.ಕೆ ಶಿವಕುಮಾರ್ಗೆ ಇಡಿಯಿಂದ ಸಮನ್ಸ್ ಬಂದಿದ್ದು, ನಾಳೆ ದೆಹಲಿಗೆ ವಿಚಾರಣೆಗೆ ಬರಲೇಬೇಕು ಎಂದು ಸಮನ್ಸ್ನಲ್ಲಿ ಉಲ್ಲೇಖಿಸಲಾಗಿದೆ. ಈ ನಡುವೆ ನಾಳೆ ವಿಚಾರಣೆಗೆ ಹಾಜರಾಗದಿರಲು ಡಿ.ಕೆ.ಶಿವಕುಮಾರ್ ಹಾಗೂ ಡಿಕೆ.ಸುರೇಶ್ ನಿರ್ಧರಿಸಿದ್ದಾರೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ (Rahul Gandhi) ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ಕರ್ನಾಟಕ್ಕೆ ತಲುಪಿ ಮುನ್ನಡೆಯುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಲಿರುವ ಕಾರಣದಿಂದಾಗಿ ವಿಚಾರಣೆಗೆ ಬೇರೆ ದಿನಾಂಕ ನಿಗದಿ ಮಾಡುವಂತೆ ಡಿಕೆ ಬ್ರದರ್ಸ್ ಇಡಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಅಮ್ಮನ ಶೂ ಲೇಸ್ ಕಟ್ಟಿದ ರಾಹುಲ್
Advertisement
Advertisement
ನಾಳೆ ಪಾದಯಾತ್ರೆ ಆದಿಚುಂಚನಗಿರಿ ಸಮೀಪ ತೆರಳಲಿದೆ ಮಠಕ್ಕೆ ರಾಹುಲ್ ಗಾಂಧಿ ಭೇಟಿ ಇದೆ. ಆ ಸಂದರ್ಭದಲ್ಲಿ ನಾವು ಇರಲೇಬೇಕಾಗುತ್ತದೆ ಎಂದು ಇಡಿಗೆ ಇಮೇಲ್ (Email) ಮೂಲಕ ಡಿಕೆ ಬ್ರದರ್ಸ್ ಮನವಿ ಮಾಡಿಕೊಂಡಿದ್ದಾರೆ. ಡಿ.ಕೆ.ಸಹೋದರರ ಮನವಿಗೆ ಇಡಿಯಿಂದ ಯಾವುದೇ ಸಮರ್ಪಕ ಪ್ರತಿಕ್ರಿಯೆ ಬಂದಿಲ್ಲ. ಕಡ್ಡಾಯವಾಗಿ ಹಾಜರಾಗಲೇಬೇಕು ಎಂಬ ಸಂದೇಶವು ಬಂದಿಲ್ಲ. ಆದ್ದರಿಂದ ಕಾನೂನು ತಜ್ಞರ ಸಲಹೆಯಂತೆ ವಿಚಾರಣೆಗೆ ಹಾಜರಾಗದಿರಲು ಡಿಕೆ ಬ್ರದರ್ಸ್ ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಕೋಳಿ ಕೇಳಿ ಮಸಾಲೆ ಅರೆಯಲ್ಲ – ಜನಸಂಖ್ಯಾ ನೀತಿ ವಿರೋಧಿಸಿದ ಅಸಾವುದ್ದೀನ್ ಓವೈಸಿಗೆ ಸಿ.ಟಿ.ರವಿ ತಿರುಗೇಟು
Advertisement
ಈ ಮೊದಲು ಒಂದು ಸಮನ್ಸ್ ಬಂದಿತ್ತು. ಆಗ ಇಮೇಲ್ ಮೂಲಕ, ಕಾಲಾವಕಾಶ ಕೊಡಿ ಎಂದು ಡಿಕೆಶಿ ಮನವಿ ಮಾಡಿಕೊಂಡಿದ್ದರು. ಈ ವೇಳೆ ಡಿಕೆಶಿ ಮನವಿಗೆ ಸ್ಪಂದಿಸದ ಇಡಿ ಅಧಿಕಾರಿಗಳು ಇಂದು ಮತ್ತೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಬರುವಂತೆ ಸೂಚಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ಪಾದಯಾತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದೇನೆ. ನಾಳೆ ವಿಚಾರಣೆಗೆ ಬರೋಕ್ಕೆ ಆಗಲ್ಲ ಅಂತ ಕೇಳಿಕೊಂಡಿದ್ದೆ. ಇಡಿಯವರು ಒಪ್ಪಿಕೊಳ್ಳದೆ ನಾಳೆ ಬರಲೇಬೇಕೆಂದು ಸಮನ್ಸ್ ಕೊಟ್ಟಿದ್ದಾರೆ. ಈ ಕುರಿತು ಈಗ ನಮ್ಮ ನಾಯಕರ ಜೊತೆ ಸಭೆ ನಡೆಸುತ್ತೇನೆ. ನಾಯಕರು ಹೋಗು ಅಂದ್ರೆ ಹೋಗುತ್ತೇನೆ ಎಂದರು.
Live Tv
[brid partner=56869869 player=32851 video=960834 autoplay=true]