Connect with us

ಮೈಸೂರು ಗ್ರಾಮಾಂತರದಲ್ಲಿ ಹೆಚ್ಚಾಯ್ತು ಕೊರೊನಾ ಸೋಂಕು!

ಮೈಸೂರು ಗ್ರಾಮಾಂತರದಲ್ಲಿ ಹೆಚ್ಚಾಯ್ತು ಕೊರೊನಾ ಸೋಂಕು!

ಮೈಸೂರು: ಅರಮಮನೆ ನಗರಿ ಜಿಲ್ಲೆಯ 1560 ಗ್ರಾಮಗಳ ಪೈಕಿ 1,217 ಗ್ರಾಮಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಸದ್ಯಕ್ಕೆ 343 ಗ್ರಾಮಗಳಿಗಿಲ್ಲ ಕೊರೊನಾ ಆತಂಕ ಇಲ್ಲ. ಈ ಬಗ್ಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ವಾಗಿ ಮಾಹಿತಿ ಬಿಡುಗಡೆ ಮಾಡಿದೆ. ಹೆಚ್.ಡಿ ಕೋಟೆ ತಾಲೂಕಿನಲ್ಲಿ ಹೆಚ್ಚು ಗ್ರಾಮಗಳಲ್ಲಿ ಕೊರೊನಾ ಕಾಣಿಸಿಕೊಂಡಿಲ್ಲ.

ಸದ್ಯಕ್ಕೆ ಜಿಲ್ಲೆಯಲ್ಲಿ ಹೆಚ್.ಡಿ ಕೋಟೆ ತಾಲೂಕು ಸೇಫ್ ಇದೆ. ಉಳಿದಂತೆ ಮೈಸೂರು ತಾಲೂಕಿನ 196 ಗ್ರಾಮಗಳ ಪೈಕಿ 179 ಗ್ರಾಮಗಳಲ್ಲಿ ಸೋಂಕು ಇದೆ. ಪಿರಿಯಾಪಟ್ಟಣದ 219 ಗ್ರಾಮಗಳ ಪೈಕಿ 184 ಗ್ರಾಮಗಳಲ್ಲಿ ಸೋಂಕು, ನಂಜನಗೂಡಿನ 202 ಗ್ರಾಮಗಳ ಪೈಕಿ 158 ಗ್ರಾಮಗಳಲ್ಲಿ, ಟಿ.ನರಸೀಪುರದ 171 ಗ್ರಾಮಗಳ ಪೈಕಿ164 ಗ್ರಾಮದಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದಿದೆ.

ಹುಣಸೂರಿನ 275 ಗ್ರಾಮಗಳ ಪೈಕಿ 211 ಗ್ರಾಮಗಳಲ್ಲಿ, ಹೆಚ್.ಡಿ ಕೋಟೆಯ 212 ಗ್ರಾಮಗಳ ಪೈಕಿ 93 ಗ್ರಾಮಗಳಲ್ಲಿ ಸೋಂಕು, ಕಾಣಿಸಿಕೊಂಡಿದ್ದು ಕೆ.ಆರ್ ನಗರದ 177 ಗ್ರಾಮಗಳ ಪೈಕಿ 155 ಗ್ರಾಮಗಳಲ್ಲಿ ಸೋಂಕಿದೆ. ಸರಗೂರು ತಾಲೂಕಿನ 108ಗ್ರಾಮಗಳ ಪೈಕಿ 73 ಗ್ರಾಮಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

Advertisement
Advertisement