InternationalLatestMain Post

ಚುನಾವಣಾ ವಂಚನೆ ಪ್ರಕರಣದಲ್ಲಿ ಆಂಗ್ ಸಾನ್ ಸೂಕಿ ತಪ್ಪಿತಸ್ಥೆ- 3 ವರ್ಷ ಜೈಲು

ನೈಪಿಡಾವ್: ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಶುಕ್ರವಾರ ಚುನಾವಣಾ ವಂಚನೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಅವರಿಗೆ ನ್ಯಾಯಾಧೀಶರು ಕಠಿಣ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೊಬೆಲ್ ಪ್ರಶಸ್ತಿ ಪುರಸ್ಕೃತೆ ಹಾಗೂ ಉಚ್ಛಾಟಿತ ನಾಯಕಿಯನ್ನು ಹಲವು ಆರೋಪಗಳ ಮೇಲೆ ಕಳೆದ ವರ್ಷದ ಆರಂಭದಲ್ಲಿಯೇ ಬಂಧಿಸಲಾಗಿದೆ. ಈಗಾಗಲೇ 17 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದ್ದು, ಆಕೆ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

2020ರಲ್ಲಿ ಮ್ಯಾನ್ಮಾರ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ(ಎನ್‌ಎಲ್‌ಡಿ) ಪಕ್ಷದಲ್ಲಿ ಸೂಕಿ ಅಗಾಧ ಶಾಸಕಾಂಗ ಬಹುಮತ ಪಡೆದು ಗೆದ್ದಿದ್ದರು. ಅವರು ಪ್ರಬಲ ಮಿಲಿಟರಿ ರಚಿಸಿದ ಪಕ್ಷವನ್ನೇ ಸೋಲಿಸಿದ್ದರು. ಆದರೆ ಬಳಿಕ ಅವರು ಚುನಾವಣೆಯಲ್ಲಿ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಇಂದು ಅವರು ತಪ್ಪಿತಸ್ಥೆ ಎಂದು ನಿರ್ಣಯಿಸಲಾಗಿದೆ. ಇದನ್ನೂ ಓದಿ: ಕೋವಿಶೀಲ್ಡ್ ಪಡೆದು ಪುತ್ರಿ ಸಾವು – ಬಿಲ್‌ಗೇಟ್ಸ್ ವಿರುದ್ಧ 1,000 ಕೋಟಿ ಪರಿಹಾರಕ್ಕಾಗಿ ತಂದೆಯ ಕಾನೂನು ಹೋರಾಟ

76 ವರ್ಷದ ಸೂಕಿ ಅವರು ಭ್ರಷ್ಟಾಚಾರದಂತಹ ಹಲವು ಆರೋಪಗಳ ಮೇಲೆ 1 ವರ್ಷಕ್ಕೂ ಹೆಚ್ಚು ಸಮಯದಿಂದ ವಿಚಾರಣೆಯಲ್ಲಿದ್ದಾರೆ. ಇದಕ್ಕಾಗಿ ಸಂಯೋಜಿತ ಗರಿಷ್ಠ ಶಿಕ್ಷೆ 190 ವರ್ಷಗಳಿಗಿಂತ ಹೆಚ್ಚಾಗಿದೆ. ಸೂಕಿಗೆ ಮಾಧ್ಯಮಗಳೊಂದಿಗೆ ಮಾತನಾಡಲು ಅವಕಾಶವಿಲ್ಲದಿರುವುದರಿಂದ ಅವರ ಈಗಿನ ಕಠಿಣ ಶಿಕ್ಷೆ ಏನು ಎಂಬುದು ಅಸ್ಪಷ್ಟವಾಗಿದೆ. ಇದನ್ನೂ ಓದಿ: ಅರ್ಜೆಂಟೀನಾ ಉಪಾಧ್ಯಕ್ಷೆಗೆ ಗುಂಡಿಕ್ಕಿ ಕೊಲ್ಲಲು ಯತ್ನ – ವೀಡಿಯೋ ವೈರಲ್‌

Live Tv

Leave a Reply

Your email address will not be published.

Back to top button