ಲಕ್ನೋ: ಶುಕ್ರವಾರ ಉತ್ತರ ಪ್ರದೇಶದ (Uttar Pradesh) ಸಹರಾನ್‌ಪುರ (Saharanpur) ಜಿಲ್ಲೆಯ ಧರ್ಮಗುರುವೊಬ್ಬರು, ಪುರುಷರು ಕೆಲಸ ಮಾಡುವ ಬ್ಯೂಟಿ ಪಾರ್ಲರ್‌ಗಳಿಗೆ (Beauty Parlour) ಮುಸ್ಲಿಂ ಮಹಿಳೆಯರು (Muslim Women) ಹೋಗುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ. ಅಂತಹ ಪಾರ್ಲರ್‌ಗಳಲ್ಲಿ ಮಹಿಳೆಯರು ತಮ್ಮ ಮೇಕಪ್ ಮಾಡಿಕೊಳ್ಳುವುದು ‘ನಿಷಿದ್ಧ’ ಮತ್ತು ‘ಕಾನೂನುಬಾಹಿರ’ ಎಂದು ಕರೆದಿದ್ದಾರೆ.
ಮುಫ್ತಿ ಅಸದ್ ಕಾಸ್ಮಿ (Mufti Asad Kasmi) ಅವರು ಈ ಹೇಳಿಕೆಗಳನ್ನು ನೀಡಿದ್ದು, ಮುಸ್ಲಿಂ ಮಹಿಳೆಯರು ಪುರುಷರು ಕೆಲಸ ಮಾಡುವ ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡುವುದನ್ನು ತಡೆಯಬೇಕು. ಬದಲಿಗೆ ಮಹಿಳೆಯರು ಮಾತ್ರ ಕೆಲಸ ಮಾಡುವ ಸಲೂನ್‌ಗಳನ್ನು ಆರಿಸಿಕೊಳ್ಳಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಐವರು ಲಷ್ಕರ್ ಭಯೋತ್ಪಾದಕರ ಹತ್ಯೆ
Advertisement
Advertisement
ಕಳೆದ ತಿಂಗಳು, ಕಾನ್ಪುರದ ಮಹಿಳೆಯೊಬ್ಬರು ಐಬ್ರೋಸ್ ಮಾಡಿಸಿದ್ದಕ್ಕಾಗಿ ಆಕೆಯ ಪತಿ ಸೌದಿ ಅರೇಬಿಯಾದಿಂದ ಫೋನ್ ಮಾಡಿ ತ್ರಿವಳಿ ತಲಾಖ್ ನೀಡಿದ್ದಾರೆ. ಆಕೆಯ ಪತಿ ಸೌದಿಯಿಂದ ವೀಡಿಯೊ ಕಾಲ್ ಮಾಡಿ ಮಾತನಾಡುವ ಸಂದರ್ಭ ಪತ್ನಿ ಐಬ್ರೋಸ್ ಮಾಡಿಸಿರುವುದನ್ನು ಗಮನಿಸಿದ್ದಾರೆ. ಈ ಕುರಿತು ಆಕೆಯನ್ನು ಪತಿ ಪ್ರಶ್ನಿಸಿದ್ದು, ಆಕೆಯ ವಿವರಣೆಯಿಂದ ಅಸಮಾಧಾನಗೊಂಡು ವೀಡಿಯೋ ಕಾಲ್‌ನಲ್ಲಿಯೇ ತ್ರಿವಳಿ ತಲಾಖ್ ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಯಿಂದ ಬ್ಲ್ಯಾಕ್‌ಮೇಲ್ – ಎಂಪಿ ದೇವೇಂದ್ರಪ್ಪ ಪುತ್ರನಿಂದ ದೂರು, ಎಫ್‌ಐಆರ್ ದಾಖಲು
Advertisement