ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಕಳ್ಳತನ ಮಾಡಿರೋ ಘಟನೆ ಬಸವೇಶ್ವರ ನಗರದ ಶಿವನಗರ 9ನೇ ಮುಖ್ಯ ರಸ್ತೆಯಲ್ಲಿ ನಡೆದಿದೆ.
Advertisement
ಇಂದು ಬೆಳಗಿನ ಜಾವ ಮನೆ ಮುಂದೆ ನಿಂತಿರುವ ಕಾರಿನ ಗಾಜು ಹೊಡೆದಿರುವ ಕಿಡಿಗೇಡಿಗಳು, ಕಾರಿನಲ್ಲಿದ್ದ ಮ್ಯೂಸಿಕ್ ಸಿಸ್ಟ್‍ಂಗಳನ್ನು ಕದ್ದೊಯ್ದಿದ್ದಾರೆ. ಈ ಹಿಂದೆ ಹಲವು ಸಹ ಈ ರಸ್ತೆಯಲ್ಲಿ ಕಳ್ಳತನ ನಡೆದಿತ್ತು.
Advertisement
Advertisement
ದ್ವಿಚಕ್ರ ವಾಹನ ಕಳವು: ಇದೇ ರಸ್ತೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನೂ ಕೂಡ ದುಷ್ಕರ್ಮಿಗಳು ಕಳವುಗೈದಿದ್ದಾರೆ. ಬೈಕ್ ಕಳವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೇ ಕಳ್ಳರಿಂದ ಕಾರಿನಲ್ಲಿದ್ದ ಮ್ಯೂಸಿಕ್ ಸಿಸ್ಟ್‍ಂ ಕಳವು ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.
Advertisement
ಈ ಎರಡೂ ಘಟನೆಗಳ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.