Connect with us

ನೆಹರು-ಗಾಂಧಿ ಕುಟುಂಬದಲ್ಲಿ ರಾಜೀವ್ ಗಾಂಧಿ ಮಾತ್ರ ಒಳ್ಳೆಯ ವ್ಯಕ್ತಿ: ಸುಬ್ರಮಣಿಯನ್ ಸ್ವಾಮಿ

ನೆಹರು-ಗಾಂಧಿ ಕುಟುಂಬದಲ್ಲಿ ರಾಜೀವ್ ಗಾಂಧಿ ಮಾತ್ರ ಒಳ್ಳೆಯ ವ್ಯಕ್ತಿ: ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ನೆಹರು- ಗಾಂಧಿ ಕುಟುಂಬದಲ್ಲಿ ರಾಜೀವ್ ಗಾಂಧಿ ಮಾತ್ರ ಒಳ್ಳೆಯ ವ್ಯಕ್ತಿ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ನೀಡಿದ್ದಾರೆ.

ಅಯೋಧ್ಯಾ ವಿಚಾರವಾಗಿ ಉಪನ್ಯಾಸ ನೀಡಲು ಭಾನುವಾರದಂದು ಪಾಟ್ನಾಗೆ ತೆರಳಿದ್ದ ಅವರು ವರದಿಗಾರರೊಂದಿಗೆ ಮಾತನಾಡಿ, ನೆಹರು-ಗಾಂಧಿ ಕುಟುಂಬದಲ್ಲಿ ರಾಜೀವ್ ಗಾಂಧಿ ಅವರು ಮಾತ್ರ ಒಳ್ಳೇ ವ್ಯಕ್ತಿ. ಅವರು ಹಿಂದೂಗಳ ಜಾಗೃತಿಗಾಗಿ ಕೊಡುಗೆ ನೀಡಿದ್ದಾರೆ ಅಂತ ಹೇಳಿದ್ರು.

ಕಾಂಗ್ರೆಸ್ ಮುಖಂಡರ ಆಕ್ಷೇಪದ ನಡುವೆಯೂ ರಾಜೀವ್ ಗಾಂಧಿ ಅವರು ಅಂದಿನ ಜನಪ್ರಿಯ ಪೌರಾಣಿಕ ಧಾರಾವಾಹಿ ರಾಮಾಯಣವನ್ನು ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರ ಮಾಡಲು ಅನುಮತಿ ನೀಡಿದ್ದರು. ಅಲ್ಲದೆ ಪ್ರಾರ್ಥನೆಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರದ ಬೀಗ ತೆಗಿಸಿದ್ರು ಅಂತ ಸುಬ್ರಮಣಿಯನ್ ಸ್ವಾಮಿ ಹೇಳಿದ್ರು.

ಅಯೋಧ್ಯಾ ವಿವಾದವನ್ನು ಕೋರ್ಟಿನಿಂದ ಹೊರಗೆ ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂದು ಸುಪ್ರೀಂ ಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ವಿವಾದ ಇತ್ಯರ್ಥವಾಗುವ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಆಶಾಭಾವನೆ ವ್ಯಕ್ತಪಡಿಸಿದ್ರು.

ಇದೇ ವೇಳೆ ಕಾಂಗ್ರೆಸ್‍ಗೆ ಟಾಂಗ್ ನೀಡಿದ ಸ್ವಾಮಿ, ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿರುವಂತೆ ಕಾಣುತ್ತಿದೆ. ಅದರ ಅಂತ್ಯ ಸಂಸ್ಕಾರ ನೆರವೇರಿಸಲು ನಾವಿದ್ದೇವೆ ಅಂದ್ರು.

Advertisement
Advertisement