ಮುಂಬೈ: ಮಹಿಳೆಯೊಬ್ಬರ (Women) ಮನೆಗೆ ನುಗಿದ್ದ ಮೂವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಹರಿತವಾದ ಕತ್ತಿಯಿಂದ ಹಲ್ಲೆ ಮಾಡಿ, ಸಿಗರೇಟ್ (Cigarettes) ನಿಂದ ಆಕೆಯ ಖಾಸಗಿ ಭಾಗಗಳನ್ನು ಸುಟ್ಟು ವಿಕೃತಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Advertisement
ಮುಂಬೈನ ಕುರ್ಲಾದಲ್ಲಿರುವ 42 ವರ್ಷದ ಮಹಿಳೆ ಮೇಲೆ ಅತ್ಯಾಚಾರ (Gang Rape) ನಡೆದಿದ್ದು, ಹರಿತವಾದ ಆಯುಧಗಳಿಂದ ಮಹಿಳೆಗೆ ಕಿರುಕುಳ ನೀಡಲಾಗಿದೆ. ಅತ್ಯಾಚಾರ ಎಸಗಿದ ಕಾಮುಕರು ಹಾಗೂ ಸಂತ್ರಸ್ತೆ ಒಂದೇ ಪ್ರದೇಶದವರಾಗಿದ್ದರು ಎಂದು ಪೊಲೀಸರು (Mumbai Police) ತಿಳಿಸಿದ್ದಾರೆ. ಇದನ್ನೂ ಓದಿ: ತುರಹಳ್ಳಿ ಫಾರೆಸ್ಟ್‌ನಲ್ಲಿ ಆಪರೇಷನ್ ಚಿರತೆ- ಬೆಂಗ್ಳೂರಿನಲ್ಲೂ `ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ
Advertisement
Advertisement
ವಿಕೃತ ಮನಸ್ಥಿತಿ: ಮಹಿಳೆ ಒಂಟಿಯಾಗಿರುವುದನ್ನು ನೋಡಿಕೊಂಡ ಕಾಮುಕರು ಒಬ್ಬೊಬ್ಬರಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಮನಸ್ಸೋ ಇಚ್ಚೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಆಕೆಯ ಖಾಸಗಿ ಭಾಗಗಳನ್ನು ಸಿಗರೇಟ್‌ನಿಂದ ಸುಟ್ಟಿದ್ದಾರೆ. ಎದೆ ಭಾಗದ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾರೆ. ಅದರಲ್ಲೊಬ್ಬ ಕೃತ್ಯವನ್ನೂ ವೀಡಿಯೋ ಮಾಡಿಕೊಂಡಿದ್ದು, ಪೊಲೀಸರಿಗೆ ಹೇಳಿದ್ರೆ ಜಾಲತಾಣದಲ್ಲಿ (Social Media) ವೀಡಿಯೋ ಹರಿಯಬಿಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
ಘಟನೆ ನಡೆದ ಒಂದೆರಡು ದಿನಗಳ ನಂತರ ಮಹಿಳೆ ನೆರೆಯವರೊಂದಿಗೆ ಕಷ್ಟ ವಿವರಿಸಿದ್ದಾಳೆ. ನಂತರ ಎನ್‌ಜಿಒ ಸಂಸ್ಥೆಯೊಂದು ಸಂಪರ್ಕಿಸಿ ಆಕೆಗೆ ಧೈರ್ಯ ತುಂಬಿದೆ. ನಂತರ ಮಹಿಳೆ ಕುರ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಇಕ್ಬಾಲ್ ಅನ್ಸಾರಿ ಹನುಮ ಮಾಲಾಧಾರಿಗಳಿಗೆ ಸ್ವಾಗತ ಕೋರಿ ಬ್ಯಾನರ್ – ಶ್ರೀರಾಮಸೇನೆ ಆಕ್ಷೇಪ
ಅತ್ಯಾಚಾರ ಎಸಗಿದ ಮೂವರು ಕಾಮುಕರ ವಿರುದ್ಧ ಐಪಿಸಿ (IPC) ಸೆಕ್ಷನ್ 376 (ಅತ್ಯಾಚಾರ), 376 ಡಿ (ಸಾಮೂಹಿಕ ಅತ್ಯಾಚಾರ), 377 (ಅಸ್ವಾಭಾವಿಕ ಲೈಂಗಿಕತೆ), 324 (ಅಪಾಯಕಾರಿ ಆಯುಧದಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಹಾಗೂ ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು (Mumbai Police) ಶೋಧ ನಡೆಸುತ್ತಿದ್ದಾರೆ.